ಅ.15 ರಿಂದ 19 ರವರೆಗೆ ಶ್ರೀರಾಮ ಭಜನಾ ಮಂದಿರದಲ್ಲಿ ಶ್ರೀ ಶಾರದಾ ಮಹೋತ್ಸವ

ಉಜಿರೆ: ಶ್ರೀರಾಮ ಭಜನಾ ಮಂದಿರ ಟ್ರಸ್ಟ್ ರಾಮನಗರ ಹಳೆಪೇಟೆಯಲ್ಲಿ 13 ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅ.15 ರಿಂದ ಅ.19 ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಅ.15 ರಂದು ಬೆಳಿಗ್ಗೆ ಶ್ರೀ ಶಾರದಾ ದೇವಿಯ ಮೂರ್ತಿ ಪ್ರತಿಷ್ಠೆ ಬಳಿಕ ಭಜನಾ ಕಾರ್ಯಕ್ರಮ ಶ್ರೀರಾಮ ಭಜನಾ ಮಂಡಳಿ ಮತ್ತು ಶ್ರೀಜಾಹ್ನವಿ ಮಹಿಳಾ ಮಂಡಳಿಯವರಿಂದ ಸಂಜೆ ಮಕ್ಕಳಿಗೆ ಮುದ್ದುಕೃಷ್ಣ ಮತ್ತು ಹಿರಿಯ, ಕಿರಿಯರಿಗೆ ಛದ್ಮವೇಷ, ಸಂಜೆ 6.00ಕ್ಕೆ ಗೀತಾರೂಪಕ, ಬಳಿಕ ಮಕ್ಕಳಿಂದ ನೃತ್ಯ. ಅ.೧೬ ರಂದು ಬೆಳಿಗ್ಗೆ 11.00 ರಿಂದ ಭಜನಾ ಕಾರ್ಯಕ್ರಮ, ಸಂಜೆ 3.00 ರಿಂದ ಶ್ರೀರಾಮ ರಕ್ಷಾ ಸ್ತೋತ್ರ ಕಂಠಪಾಠ, ಸಾಯಂಕಾಲ ಮರೆಯಲಾಗದ ಹಾಡುಗಳು ರೋಟರಿ ಮಿತ್ರರಿಂದ ಅ.17 ರಂದು ಬೆಳಿಗ್ಗೆ ಭಜನೆ ಅಪರಾಹ್ನ ಭಕ್ತಿಗೀತೆ ಸ್ಪರ್ಧೆ ಸಾಯಂಕಾಲ ಶ್ರೀರಾಮ, ವಿದ್ಯಾನಿಧಿ ಟ್ರಸ್ಟ್ ವತಿಯಿಂದ ವಿದ್ಯಾನಿಧಿ ವಿತರಣೆ, ಸಂಜೆ 7.00 ರಿಂದ ಹಾಸ್ಯ ಸಂಜೆ ನ್ಯಾಯವಾದಿಗಳಾದ ಕೆ ಪ್ರತಾಪಸಿಂಹ ನಾಯಕ್ ರವರಿಂದ. ಅ.18 ರಂದು ಬೆಳಿಗ್ಗೆ ಭಜನೆ ಅಪರಾಹ್ನ 3.00ರಿಂದ ರಂಗದಲ್ಲಿ ಸ್ಪರ್ಧೆ, ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ವಿಜೇತರಿಗೆ ಬಹುಮಾನ ವಿತರಣೆ. ಬಳಿಕ ಸಮಾಜ ಬಾಂಧವರಿಂದ ಕೊಂಕಣಿ ನಾಟಕ. ಅ.19 ರಂದು ಬೆಳಿಗ್ಗೆ 11.00 ರಿಂದ ಮತ್ತು ಸಂಜೆ 5.30 ರಿಂದ ಭಜನೆ, ಸಂಜೆ 6.30 ಕ್ಕೆ ವಿಸರ್ಜನಾ ಪೂಜೆ ಬಳಿಕ ಶೋಭಾ ಯಾತ್ರೆ, ಶಾರದಾ ದೇವಿ ಮೂರ್ತಿ ವಿಸರ್ಜನೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.