ಅರಸಿನಮಕ್ಕಿ: ಉಚಿತ ದಂತ ವೈದ್ಯಕೀಯ ಶಿಬಿರ

ಅರಸಿನಮಕ್ಕಿ: ರಾಜ್ಯ ಸರಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘ ಬೆಳ್ತಂಗಡಿ ಇದರ ದಶಮಾನೋತ್ಸವ ಆಚರಣೆಯ ಪ್ರಯುಕ, ಗ್ರಾಮ ಪಂಚಾಯತ್ ಅರಸಿನಮಕ್ಕಿ ಇದರ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಳ್ತಂಗಡಿ, ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಸಿನಮಕ್ಕಿ, ಆಡಳಿತ ಮಂಡಳಿ ಗೋಪಾಲಕೃಷ್ಣ ಅನುದಾನಿತ ಹಿ.ಪ್ರಾ ಶಾಲೆ ಅರಸಿನಮಕ್ಕಿ ಇದರ ಸಹಭಾಗಿತ್ವದಲ್ಲಿ ಎ.ಜೆ ದಂತ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಇದರ ವತಿಯಿಂದ ಬೃಹತ್ ಉಜಿತ ದಂತ ವೈದ್ಯಕೀಯ ಶಿಬಿರವು ಅರಸಿನಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಅ.7 ರಂದು ಜರುಗಿತು.
ಹತ್ಯಡ್ಕ ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಎ.ಜಗನ್ನಾಥ ಗೌಡ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹತ್ಯಡ್ಕ ಪ್ರಾ.ಕೃ.ಪ.ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಟಿ ಶೆಟ್ಟಿಗಾರ್, ಗ್ರಾ.ಪಂ ಸದಸ್ಯರಾದ ಸುಂದರ ಗೌಡ, ಜಯರಾಮ ಶೆಟ್ಟಿ, ಸರಿತಾ ಭಿಡೆ, ಅಣ್ಣು ಮುಗೇರಾ, ಶಕುಂತಳಾ ಆಚಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವೆಂಕಪ್ಪ ಗೌಡ, ಮಾಜಿ ತಾ.ಪಂ ಸದಸ್ಯ ವಾಮನ ತಾಮ್ಹಣ್‌ಕರ್, ಶಾಲಾ ಮುಖ್ಯೋಪಾಧ್ಯಾಯ ಸಂಜೀವ ನಾಯ್ಕ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್, ಕಾರ್ಯದರ್ಶಿ ಚಂದ್ರಶೇಖರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ, ಉಪಾಧ್ಯಕ್ಷ ಚಿದಾನಂದ ಹೂಗಾರ್, ಶ್ರೀಮತಿ ಆರತಿ, ನಿರ್ಮಲ್ ಕುಮಾರ್, ದಂತ ಚಿಕಿತ್ಸೆಯನ್ನು ಎ.ಜೆ ಆಸ್ಪತ್ರೆಯ ಡಾ| ಮಧುಸೂದನ್ ಕೈಕುರೆ ಮತ್ತು ತಂಡದವರು ನಡೆಸಿಕೊಟ್ಟರು. ಸುಮಾರು 200 ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.