ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶಾಸಕರಿಗೆ ಮನವಿ

ಬೆಳ್ತಂಗಡಿ:  ಕರ್ನಾಟಕ ರಾಜ್ಯದಲ್ಲಿ ಕಳೆದ ವರ್ಷ 23 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಬರ್ಬರ ಹತ್ಯೆ ಪ್ರಕರಣ ರಾಷ್ಟ್ರವ್ಯಾಪಿ ಸುದ್ಧಿಯಾಗಿತ್ತು. ಇದರಲ್ಲಿ ಕಾಂಗ್ರೆಸ್ ಸರ್ಕಾರವು ಈ ಬೀಕರ ಹತ್ಯೆಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ, ತಪ್ಪಿತಸ್ತರಿಗೆ ಸೂಕ್ತ ಶಿಕ್ಷೆ ನೀಡುವುದು ಅಪೇಕ್ಷಿತವಿತ್ತು. ಆದರೆ ಸರ್ಕಾರವು ಈ ಪ್ರಕರಣದಲ್ಲಿ ಅರೋಪಿಗಳ ಪರವಾಗಿ ನಡೆದುಕೊಳ್ಳುವ ಮೂಲಕ ಅಪರಾಧಿಗಳಿಗೆ ಜಾಮೀನು ಸಿಗುವ ಹಾಗೆ, ಅವರು ಬಿಡುಗಡೆಯಾಗುವ ಹಾಗೆ ನಡೆದುಕೊಂಡಿರುವುದು ದುರದೃಷ್ಠಕರವಾಗಿದೆ. ಪೊಲೀಸರು ಪ್ರಾರಂಭದಲ್ಲಿ ಕಾನೂನು ಬಾಹಿರ ತಡೆ ಕಾಯಿದೆಯನ್ನು ಕೆಲವು ಹತ್ಯೆಗಳ ಪ್ರಕರಣದಲ್ಲಿ ಹಾಕಿದರೂ ಸಹ, ಆರೋಪಿಗಳಿಗೆ ಜಾಮೀನು ಸಿಗಲು ಯಾವುದೇ ವಿರೋಧ ಮಾಡಲಿಲ್ಲ.

ಈ ಕಾಯಿದೆಯ ಕಾಲಂಗಳನ್ನು ಪೊಲೀಸರು ಯೋಗ್ಯ ರೀತಿಯಲ್ಲಿ ಉಪಯೋಗಿಸಿ ಆರೋಪಿಗಳಿಗೆ ಶಿಕ್ಷೆಯಾಗುವ ಹಾಗೆ ಪ್ರಯತ್ನ ಮಾಡಲಿಲ್ಲ. ಆರೋಪ ಪತ್ರವನ್ನು ಸಲ್ಲಿಸುವಾಗ ಕಾನೂನು ಬಾಹಿರ ಕಾಯಿದೆಯನ್ನು ಪೋಲಿಸರು ತೆಗೆದರು. ಇದಲ್ಲದೇ ಹಣಕ್ಕಾಗಿ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣದಲ್ಲಿ ಉಚ್ಚ ನ್ಯಾಯಾಲಯವು ಜಾಮೀನು ನೀಡುವಾಗ ಪೊಲೀಸರಿಗೆ ಕಠಿಣ ಸೂಚನೆಯನ್ನು ನೀಡಿದೆ. ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನೀಡುವಾಗ ಸಕ್ಷಾದಾರಗಳ ಕೊರತೆಯ ಕಾರಣಗಳನ್ನು ಹೇಳುತ್ತಿದೆ. ಒಟ್ಟಾರೆ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆಯನ್ನು ಮಾಡಿಲ್ಲ. ತನಿಖೆಯಲ್ಲಿ ಸರ್ವೋಚ್ಛ ನ್ಯಾಯಾಲಯದ ಮಾರ್ಗದರ್ಶಕ ಸೂತ್ರಗಳನ್ನು ಸರಿಯಾಗಿ ಅನುಷ್ಠಾನ ಮಾಡದ ತನಿಖಾ ಅಧಿಕಾರಿಗಳ ವಿರುದ್ಧ ತನಿಖೆಯಾಗಬೇಕು ಎಂದು ವಿನಂತಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಶಾಸಕರಿಗ ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ  ಜಯರಾಜ್ ಸಾಲಿಯಾನ್, ಶಶಿಧರ ಎಮ್,  ಜಗದೀಶ ಆಚಾರ್ಯ,  ಕರುಣಾಕರ ಅಭ್ಯಂಕರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.