HomePage_Banner_
HomePage_Banner_

ಸೌತಡ್ಕದ ‘ಸೇವಾಧಾಮ’ದಲ್ಲಿ ‘ಪಂಚವಟಿ’ ತಾಳಮದ್ದಳೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಎದುರುಗಡೆ ಇತ್ತೀಚೆಗೆ ಪ್ರಾರಂಭಗೊಂಡಿರುವ ಸೇವಾಭಾರತಿ ಕನ್ಯಾಡಿಯ ಅಂಗಸಂಸ್ಥೆಯಾದ ಬೆನ್ನುಮೂಳೆ ಮುರಿಕ್ಕೊಳಗಾದವರ ಪುನಶ್ಚೇತನ ಕೇಂದ್ರ ‘ಸೇವಾಧಾಮ’ದಲ್ಲಿ  ಸೇವಾಭಾರತಿಯ ವಿಭಾಗವಾದ ಯಕ್ಷಭಾರತಿ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ ‘ಪಂಚವಟಿ’ ನೆರವೇರಿತು.
ಹಿಮ್ಮೆಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ ಚಂಡೆ ಮದ್ದಳೆಯಲ್ಲಿ, ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ. ಶ್ರೇಯಸ್ ಪಾಳಂದೆ, ಮುಮ್ಮೇಳದಲ್ಲಿ ರಾಮನಾಗಿ ಹರಿದಾಸ ಗಾಂಭೀರ, ಶೂರ್ಪನಖಿಯಾಗಿ ಸುರೇಶ್ ಕುದ್ರೆಂತ್ತಾಯ ಉಜಿರೆ, ಲಕ್ಷ್ಮಣನಾಗಿ ಸತೀಶ್ ಶಿರ್ಲಾಲು. ಋಷಿ ಮುನಿಯಾಗಿ ಸಂತೋಷ್ ಕೇಳ್ಕರ್ ಪಾತ್ರ ನಿರ್ವಹಿಸಿದರು. ಹರೀಶ್ ಕೊಳ್ತಿಗೆ ಹಾಗೂ ಕು.ಅಕ್ಷತಾ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.