ಸ್ಮಾರ್ಟ್‌ಸಿಟಿ ಅನುದಾನದಲ್ಲಿ 15 ಕೋಟಿ ರೂ. ಕಸಾಯಿಖಾನೆಗೆ ಮೀಸಲು: ಹಿಂದೂ ಸಂಘಟನೆಗಳ ತೀವ್ರ ವಿರೋಧ

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆಗೆ ಬಿಡುಗಡೆಗೊಳಿಸಿದ ಅನುದಾನದಲ್ಲಿ ಕುದ್ರೋಳಿಯಲ್ಲಿರುವ ಅಕ್ರಮ ಕಸಾಯಿಖಾನೆ ಅಭಿವೃದ್ಧಿಗೆ 15 ಕೋಟಿ ರೂ. ಮೀಸಲಿಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರ ನಿಲುವನ್ನು ಬಲವಾಗಿ ಖಂಡಿಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಮತ್ತು ವೇಣೂರು ಪ್ರಖಂಡ, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸಂಘಟನೆ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದೆ.
ಅ.8 ರಂದು ಬೆಳ್ತಂಗಡಿ ನಗರದ ವಾರ್ತಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಗಳ ಮುಖ್ಯಸ್ಥರಾದ ಅಗರ್ತ ಸುಬ್ರಹ್ಮಣ್ಯ ಕುಮಾರ್ ಮತ್ತು ಶಶಾಂಕ್ ಭಟ್ ತಮ್ಮ ನಿಲುವು ಪ್ರಕಟಿಸಿದರು. ರಾಜ್ಯ ಸರಕಾರ ಯಾರನ್ನೋ ತುಷ್ಟೀಕರಣಗೊಳಿಸಲು ಈ ನಿರ್ಧಾರಕ್ಕೆ ಬಂದಿದ್ದು, ಇಂದು ಬಹುಸಂಖ್ಯಾತರಾಗಿರುವ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಗೊಳಿಸುವ ತೀರ್ಮಾನವಾಗಿದೆ. ಇದನ್ನು ಹಿಂಪಡೆಯದೇ ಇದ್ದಲ್ಲಿ ಮುಂದಕ್ಕೆ ಸಂಘಟನೆಗಳ ವತಿಯಿಂದ ಉಗ್ರ ರೀತಿಯ ಹೋರಾಟ ಅನಿವಾರ್ಯವಾದೀತು ಎಂದು ಎಚ್ಚರಿಸಿದರು.
ಅಲ್ಲದೆ ಕೇರಳದ ಕೋಟ್ಯಾಂತರ ಭಕ್ತರ ಆರಾಧ್ಯ ಕ್ಷೇತ್ರವಾಗಿರುವ ಶಬರಿ ಮಲೆಗೆ ಎಲ್ಲಾ ವಯೋಮಾನದ ಸ್ತ್ರೀಯರ ಪ್ರವೇಶದ ಬಗ್ಗೆ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ಕೂಡಾ ಆಘಾತಕಾರಿಯಾಗಿದ್ದು ಈ ಬಗ್ಗೆ ಅಲ್ಲಿನ ಸರಕಾರ ಇದನ್ನು ಮೇಲ್ಮನವಿ ಮೂಲಕ ಪ್ರಶ್ನಿಸಿ ಇಲ್ಲೂ ಕೂಡ ಆಗಿರುವ ಧಾರ್ಮಿಕ ಭಾವನೆಗೆ ಘಾಸಿಯನ್ನು ಸರಿಪಡಿಸಬೇಕು. ಇದನ್ನೂ ಸಮೂಹ ಸಂಘಟನೆ ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಅ. 9 ರಂದು ಕುದ್ರೋಳಿಯಲ್ಲಿ ಹಿಂದೂ ಸಂಘಟನೆಗಳ ಸಭೆ
ಕಸಾಯಿಖಾನೆಗೆ ಅನುದಾನ ಮೀಸಲು ವಿಚಾರವಾಗಿ ಚರ್ಚಿಸಲು ಅ.9 ರಂದು ಕುದ್ರೋಳಿಯಲ್ಲಿ ಸಮಾವೇಶದ ಶೈಲಿಯಲ್ಲಿ ಸಂಘ ಪರಿವಾರದ ಸಂಘಟನೆಗಳು ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ನಿರ್ಣಯಕ್ಕೆ ಬರಲಿದೆ ಎಂದೂ ಅವರು ತಿಳಿಸಿದರು.
ಗೋಷ್ಟಿಯಲ್ಲಿ ಸಂಘಟನೆ ಮುಖಂಡರಾದ ನವೀನ್ ನೆರಿಯ, ಭಾಸ್ಕರ ಧರ್ಮಸ್ಥಳ, ರಾಮಪ್ರಸಾದ್ ಮರೋಡಿ, ಸಂತೋಷ್ ಅತ್ತಾಜೆ, ಸೌಜನ್ಯಾ ಮತ್ತು ಶರಣ್ಯಾ, ಅನಂತು ಮುಂಡಾಜೆ ಉಪಸ್ಥಿತರಿದ್ದರು.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.