HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ತಾಲೂಕು ರಾಮಕ್ಷತ್ರಿಯ ಸಂಘದ 18 ನೇ ವಾರ್ಷಿಕೋತ್ಸವ

ಬೆಳ್ತಂಗಡಿ : ತಾಲೂಕು ರಾಮ ಕ್ಷತ್ರಿಯ ಸಂಘ ರಾಮನಗರ ಬೆಳ್ತಂಗಡಿ ಇದರ 18ನೇ ವಾರ್ಷಿಕೋತ್ಸವ ಕ್ಷಾತ್ರೋತ್ಸವ ಅ. 7ರಂದು ಬೆಳ್ತಂಗಡಿ ಲಾಯಿಲ  ರಾಘವೇಂದ್ರ ಮಠದ ಸಭಾಭವನದಲ್ಲಿ ಜರುಗಿತು.
ಸಮಾರಂಭವನ್ನು ಕರ್ನಾಟಕ ಸರಕಾರದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಉಡುಪಿಯ ನೇತ್ರ ತಜ್ಞ ಡಾ| ಕೃಷ್ಣ ಪ್ರಸಾದ್, ಜಿ.ಪಂ ಸದ್ಸಯ ಸುರೇಶ್ ಬಟ್ಟಾಡಿ, ಬ್ರಹ್ಮಾವರ ಪಿ ಎಸ್ ಐ ಶ್ರೀಕಾಂತ್, ಉಳ್ಳಾಲ  ರಾಮ ಕ್ಷತ್ರಿಯ ಸಂಘದ ಅಧ್ಯಕ್ಷ ಸೀತಾರಾಮ ಕೊಪ್ಪಲು, ಬೆಂಗಳೂರು  ರಾಮ ಕ್ಷತ್ರಿಯ ಸಂಘ ಯುವ ವೇದಿಕೆ ಅಧ್ಯಕ್ಷ ಸುರೇಶ್ ಬೀಜೂರು, ಕಾರ್ಕಳ ರಾಮ ಕ್ಷತ್ರಿಯ ಮಹಿಳಾ ಸಂಘದ ಕಾರ್ಯದರ್ಶಿ ತಿಲಕ ಮಹೇಶ್ ರಾವ್, ತಾಲೂಕು ರಾಮ ಕ್ಷತ್ರಿಯ ಸಂಘದ ಗೌರವಾಧ್ಯಕ್ಷ ಕೆ. ವಿಜಯಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಕುಂದಾಪುರ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರವೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಯ ಎಂ. ಶೇರೆಗಾರ, ಉಜಿರೆಯ ನಿವೃತ್ತ ಶಿಕ್ಷಕ ಸದಾನಂದ ಎಂ, ಶ್ರೀರಾಮ ಕ್ರೆಡಿಟ್ ಸಹಕಾರಿ ಸಂಘದ ಅಧ್ಯಕ್ಷ ಡಾ| ಪ್ರಮೋದ್ ಆರ್. ನಾಯಕ್ ಇವರನ್ನು ಸನ್ಮಾನಿಸಲಾಯಿತು.

 

 

 

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.