ಎಸ್‌ಎಮ್‌ಎ ವತಿಯಿಂದ ನಾವೂರು ಮುರದಲ್ಲಿ ರಕ್ತದಾನ ಶಿಬಿರ

ಮುರ: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅದೀನದಲ್ಲಿ ಕಾರ್ಯಚರಿಸುತ್ತಿರುವ ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಮುರ ರೇಂಜ್ ಹಾಗೂ ಸುನ್ನೀ ಮೆನೇಜ್‌ಮೆಂಟ್ ಅಸೋಷಿಯೇಶನ್ ಮುರ ರಿಜನಲ್ ಇದರ ಜಂಟಿ ಆಶ್ರಯದಲ್ಲಿ ಸೆ. 29 ರಂದು ನೂರುಲ್ ಹುದಾ ಮದರಸ ಮುರದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.
ಅಸಯ್ಯಿದ್ ಕಿಲ್ಲೂರ್ ತಂಙಳ್ ದುಆ ಪ್ರಾರ್ಥನೆ ನಡೆಸಿದರು. ರೇಂಜ್ ಅಧ್ಯಕ್ಷ ಅಸಯ್ಯಿದ್ ಮುರ ತಂಙಳ್ ರಕ್ತ ನೀಡುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಆರೋಗ್ಯ ಕ್ಲಿನಿಕ್ ನಾವೂರಿನ ಡಾ. ಪ್ರದೀಪ್ ಮುಖ್ಯ ಅತಿಥಿಯಾಗಿ ಶುಭ ಕೋರಿದರು.
ವೈದ್ಯರಾದ ಅನೂಪ್, ಎಸ್‌ಎಮ್‌ಎ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಮುಂಡಾಜೆ, ಜಿಲ್ಲಾ ಪ್ರತಿನಿಧಿ ಮುಹಮ್ಮದ್ ಮುಸ್ಲಿಯಾರ್, ಎಸ್‌ಎಂಎ ಜಿ.ಕೆರೆ ಝೋನ್ ಅಧ್ಯಕ್ಷ ಎಂ.ಕೆ ಬದ್ರುದ್ದೀನ್, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಕಾಜೂರು ಮುದರ್ರಿಸ್ ಇಕ್ಬಾಲ್ ಸಖಾಫಿ, ಹಸೈನಾರ್ ಇಂದಬೆಟ್ಟು, ಯೂಸೂಫ್ ನಾವೂರು, ಹಸನಬ್ಬ ಎರ್ಮಾಳ, ಆದಂ ಕಿಲ್ಲೂರ್, ಝಮೀರ್ ಸಅದಿ, ಅಬ್ದುರ್ರಝಾಖ್ ಇಂದಾದಿ, ಸಿರಾಜುದ್ದೀನ್ ಸಖಾಫಿ, ಸತ್ತಾರ್ ಸಖಾಫಿ, ನಝೀರ್ ಮುಸ್ಲಿಯಾರ್, ಖಾದಿರ್ ಮಿಸ್ಬಾಹಿ, ಅಬ್ಬಾಸ್ ಸಖಾಫಿ, ಖಾಸಿಂ ಸಅದಿ, ಅಬ್ದುಲ್ ಅಝೀಝ್ ಸಖಾಫಿ, ಅಬ್ದುರ್ರಶೀದ್ ಮದನಿ, ಖಾದರ್ ಮುಸ್ಲಿಯಾರ್, ರಫೀಖ್ ಮದನಿ ಬಾಗವಹಿಸಿದ್ದರು. ರಿಜಿನಲ್ ಅಧ್ಯಕ್ಷ ವಝೀರ್ ಬಂಗಾಡಿ ಸ್ವಾಗತಿಸಿ, ಕಾರ್ಯದರ್ಶಿ ಕಮಾಲ್ ಮುಸ್ಲಿಯಾರ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.