ಎಂಡೋ ಪೀಡಿತ ಬಾಲಕಿ ಸಾವು

ಕೊಕ್ಕಡ: ಇಲ್ಲಿಗೆ ಸನಿಹದ ನೆಲ್ಯಾಡಿ ಪಡುಬೆಟ್ಟು ಗಾಂಧಾರಿಮಜಲು ನಿವಾಸಿ, ಕೊಕ್ಕಡ ಎಂಡೋ ಪಾಲನಾ ಕೇಂದ್ರದ ಸದಸ್ಯೆಯಾಗಿದ್ದ, ವಾಮನ ನಾಯ್ಕ ಮತ್ತು ಪುಷ್ಪಾವತಿ ದಂಪತಿ ಅವರ ಪುತ್ರಿ ಎಂಡೋ ಪೀಡಿತ ದಿವ್ಯಾ ಜಿ (18 ವ.) ಅವರು ಅನಾರೋಗ್ಯಕ್ಕೆ ತುತ್ತಾಗಿ ಅ. 3 ರಂದು ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
15 ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಗಂಭೀರ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಲಾಯಿತಾದರೂ ಅದಕ್ಕೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ದಿವ್ಯಾ ಬಾಲ್ಯದಿಂದಲೇ ಎಂಡೋ ಪೀಡಿತೆಯಾಗಿದ್ದರು. ಆದರೂ ಆಕೆ ಕಲಿಕೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದು ಎಸ್ಸೆಸ್ಸೆಲ್ಸಿಯಲ್ಲಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು. ಬಳಿಕ ನೆಲ್ಯಾಡಿ ಸಂತ ಜಾರ್ಜ್ ಪ. ಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಅಭ್ಯಾಸ ಪೂರ್ತಿಗೊಳಿಸಿದ್ದ ಅವರಿಗೆ ಆರೋಗ್ಯ ಕೈಕೊಟ್ಟಿದ್ದರಿಂದ ದ್ವಿತೀಯ ಪಿಯುಸಿ ಮುಂದುವರಿಸಲಾಗದೆ ಆಸ್ಪತ್ರೆ ಸೇರಿದ್ದರು. ಇದೀಗ ಅವರು ಮೃತಪಟ್ಟಿದ್ದು, ತಂದೆ ತಾಯಿ ಮತ್ತು ಏಕೈಕ ಸಹೋದರ ದಿನೇಶ್ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.