ಕಕ್ಕಿಂಜೆ: ಎಟಿಎಂ ಮತ್ತು ಅಂಗಡಿಗಳಲ್ಲಿ ಕಳ್ಳತನಕ್ಕೆ ವಿಫಲ ಯತ್ನ

Advt_NewsUnder_1
Advt_NewsUnder_1
Advt_NewsUnder_1

ಕಕ್ಕಿಂಜೆ: ಚಾರ್ಮಾಡಿ ಗ್ರಾ.ಪಂಚಾಯತ್‌ಗೆ ಒಳಪಡುವ ಕಕ್ಕಿಂಜೆ ಇಲ್ಲಿನ ಪೇಟೆಯಲ್ಲೇ ಇರುವ ರಾಷ್ಟ್ರೀಕೃತ ಬ್ಯಾಂಕೊಂದರ ಎಟಿಎಂಗೆ ಅ. 5 ರಂದು ರಾತ್ರಿ ಕಳ್ಳರು ಕನ್ನ ಹಾಕಿ ಕಳವುಗೈಯ್ಯಲು ವಿಫಲ ಯತ್ನ ನಡೆಸಿದ್ದಾರೆ. ಅಂತೆಯೇ ಸ್ಥಳೀಯ ಮಾಂಸದ ಕೋಳಿ ಅಂಗಡಿ ಮತ್ತು ತರಕಾರಿ ಅಂಗಡಿಯೊಳಗೂ ನುಗ್ಗಿ ಅಲ್ಲೂ ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ.
ಎಟಿಎಂ ನ ಯಂತ್ರವನ್ನು ಕಲ್ಲಿನಿಂದ ಜಜ್ಜಿ ಕಳವಿಗೆ ಯತ್ನ ನಡೆಸಲಾಗಿದೆ. ಆದರೆ ಯಂತ್ರ ತೆರೆಯಲು ಸಾಧ್ಯವಾಗದೆ ಮರಳಿದ್ದಾರೆ. ಇಲ್ಲಿ ಗಾಜಿನ ವಸ್ತುಗಳು ಪುಡಿಯಾಗಿದೆ. ತರಕಾರಿ ಅಂಗಡಿಯೊಳಗೆ ಹೊಕ್ಕಿದ ಕಳ್ಳ ಕ್ಯಾಶ್ ಕೌಂಟರ್‌ನಲ್ಲಿ ಹಣಕ್ಕಾಗಿ ತಡಕಾಡಿದ್ದು ನಗದು ಪತ್ತೆಯಾಗದ್ದರಿಂದ ಹರಿಕೆ ಡಬ್ಬಿಯನ್ನು ಹೊತ್ತೊಯ್ದಿದ್ದಾರೆ. ಇನ್ನೊಂದು ಕೋಳಿ ಅಂಗಡಿಗೆ ನುಗ್ಗಿ ಅಲ್ಲೂ ಕಳ್ಳತನಕ್ಕೆ ಪ್ರಯತ್ನಪಡಲಾಗಿದ್ದು, ಬರಿಗೈಯ್ಯಲ್ಲಿ ವಾಪಾಸಾಗಲಾಗಿದೆ. ಈ ಕೃತ್ಯವನ್ನು ಒಂದೇ ತಂಡ ನಡೆಸಿರುವ ಸಾಧ್ಯತೆ ಇದೆ. ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ತರಕಾರಿ ಅಂಗಡಿ ಪ್ರವೇಶಿಸಿದ ವ್ಯಕ್ತಿ ನೆಟ್ಟಗೆ ನಿಂತುಕೊಳ್ಳಲಾಗದಷ್ಟು ಅಮಲು ಪದಾರ್ಥ ಸೇವಿಸಿದಂತೆ ಗೋಚರಿಸುತ್ತಿದ್ದಾರೆ. ಕೃತ್ಯದ ಕುರಿತಾಗಿ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.