ರಾಜಕೇಸರಿ ಬೆಳ್ತಂಗಡಿಯಿಂದ ಪುತ್ತೂರು ಆನಂದಾಶ್ರಮದಲ್ಲಿ ಅನ್ನದಾನ, ವೈದ್ಯರಿಗೆ ಸನ್ಮಾನ

ಬೆಳ್ತಂಗಡಿ: 4 ವರ್ಷಗಳಿಂದ ತಾಲೂಕಿನಾಧ್ಯಂತ ಸಾಮಾಜಿಕ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಜಕೇಸರಿ ಸಂಘಟನೆಯಿಂದ ಪುತ್ತೂರು ತಾಲೂಕು ಸಂಪ್ಯ ಆನಂದಾಶ್ರಮದಲ್ಲಿ ಅ. 7 ರಂದು ಅನ್ನದಾನ, ಆಶ್ರಮವಾಸಿಗಳಿಗೆ ಹಣ್ಣು ಹಂಪಲು, ಸಿಹಿ ತಿಂಡಿ ವಿತರಣೆ ಕಾರ್ಯಕ್ರಮ ನಡೆಯಿತು.
ಜೊತೆಗೆ ಆನಂದಾಶ್ರಮದ ಅಧ್ಯಕ್ಷರಾಗಿದ್ದು ಪುತ್ತೂರು ತಾಲೂಕಿನ ಪ್ರಥಮ ವೈದ್ಯೆ ಎಂಬ ಕೀರ್ತಿಗೂ ಭಾಜನರಾಗಿರುವ ಡಾ. ಗೌರಿ ಪೈ ಅವರನ್ನು ಸನ್ಮಾನಿಸಿ ಹೃದಯಸ್ಪರ್ಷಿ ಸನ್ನಿವೇಶಕ್ಕೆ ಕಾರಣವಾಯಿತು.
ರಾಜಕೇಸರಿಯ ಸ್ಥಾಪಕಾಧ್ಯಕ್ಷ ದೀಪಕ್ ಜಿ, ಅಧ್ಯಕ್ಷ ಅರ್ಪಣ್ ಶೆಟ್ಟಿ, ಸಂಚಾಲಕ ಪ್ರದೀಪ್ ಶೆಟ್ಟಿ ಎಸ್ ಇವರ ನೇತೃತ್ವದಲ್ಲಿ ತಂಡದ ಸದಸ್ಯರು ಆನಂದಾಶ್ರಮಕ್ಕೆ ಭೇಟಿಇತ್ತು ಈ ಕಾರ್ಯಕ್ರಮವನ್ನು ನಿರ್ವಹಿಸಿದರು.
ಈ ಸಂದರ್ಭ ಆನಂದಾಶ್ರಮದ ವ್ಯವಸ್ಥಾಪಕ ಸದಾಶಿವ ಪೈ, ರಾಜಕೇಸರಿ ಮಹಿಳಾ ಘಟಕದ ಎಲ್ಲಾ ಸದಸ್ಯರುಗಳು, ರಾಜ ಕೇಸರಿ ಮಡಂತ್ಯಾರಿನ ಅಧ್ಯಕ್ಷ ಪ್ರವೀಣ್, ರಾಜ ಕೇಸರಿ ಕುತ್ಲೂರು ಘಟಕದ ಅಧ್ಯಕ್ಷ ಲೋಕೇಶ್, ಶ್ರೀ ರಾಮ್ ಸಿಟಿ ಯೂನಿಯನ್ ಬ್ರಾಂಚ್ ಮೆನೇಜರ್ ಸಂತೋಷ್ ಕುಲಾಲ್ ಕಟ್ಟೆ ಹಾಗೂ ರಾಜಕೇಸರಿ ಬೆಳ್ತಂಗಡಿ ತಾಲೂಕಿನ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು. ರಾಜಕೇಸರಿ ಸಂಘಟನೆ ಸರಕಾರಿ ಆಸ್ಪತ್ರೆ ಸ್ವಚ್ಛತೆ, ಸರಕಾರಿ ಶಾಲೆ ಉಳಿಸಿ ಅಭಿಯಾನ, ಅನಾಥಾಶ್ರಮಗಳಿಗೆ ನೆರವು, ಆರೋಗ್ಯ ಶಿಬಿರ, ಕ್ರೀಡಾಕೂಟ ಸಂಘಟನೆ, ಕಲಾವಿದರಿಗೆ ಪ್ರೋತ್ಸಾಹ ಇತ್ಯಾಧಿ ಸಾಮಾಜಿಕ ಜನಪರ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕೇವಲ4ವರ್ಷಗಳಲ್ಲೇ ಮನೆಮಾತಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.