ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಬೆಳ್ತಂಗಡಿ ಡಿವಿಷನ್ ವತಿಯಿಂದ ಸಾಧಕರಿಗೆ ಸನ್ಮಾನ

ಬೆಳ್ತಂಗಡಿ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಭವಿಷ್ಯದ ನಾಯಕರನ್ನು ಸೃಷ್ಟಿಸಲು ಸಕ್ರೀಯ ಕಾರ್ಯಕರ್ತರ ಟೀಂ ಹಸನೈನ್ 2ನೇ ಕ್ಯಾಂಪ್ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ಅಧ್ಯಕ್ಷ ಖಾಸಿಂ ಮುಸ್ಲಿಯಾರ್ ಮಾಚಾರು ಅಧ್ಯಕ್ಷತೆಯಲ್ಲಿ ಬದ್ರುಲ್ ಹುದಾ ಮದರಸ ಗೋಳಿಯಂಗಡಿಯಲ್ಲಿ ನಡೆಯಿತು.
ಸ್ಥಳೀಯ ಮುಅಲ್ಲಿಮ್ ಉಮರುಲ್ ಫಾರೂಕ್ ಝುಹ್ರಿ ಕಾರ್ಯಕ್ರಮ ಉದ್ಘಾಟಿಸಿದರು.
ತೌಫೀಕ್ ವೇಣೂರು, ರಶೀದ್ ಮಡಂತ್ಯಾರು ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್‌ನ ಉಪಾಧ್ಯಕ್ಷರಾದ ಅಯ್ಯೂಬ್ ಮಳ್ಹರಿ,ಕೋಶಾಧಿಕಾರಿಯಾದ ರಶೀದ್ S. ಸದಸ್ಯರಾದ ಇಕ್ಬಾಲ್ ಮಾಚಾರು ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಸರಕಾರಿ ಪ್ರೌಢ ಶಾಲೆ ನಡ ಇಲ್ಲಿ ಗಣಿತ ಶಿಕ್ಷಕ ಸದ್ರಿ ಶಾಲೆಯಲ್ಲಿ ಗಣಿತದ ಅತ್ಯುತ್ತಮ ಮಾದರಿ ಪ್ರಯೋಗಾಲಯ ನಿರ್ಮಿಸಿ ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿ, 2018 ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಯಾಕೂಬ್ ಎಸ್ ಕೊಯ್ಯುರು ಅವರನ್ನು ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ಸನ್ಮಾನಿಸಲಾಯಿತು. ತೌಫೀಕ್ ವೇಣೂರು ಸ್ವಾಗತಿಸಿ, ಶರೀಫ್ ಶಾಝ್ ನಾವೂರು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.