ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿಗೆ ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್-2018 ಪ್ರದಾನ

ಬೆಳ್ತಂಗಡಿ: ಇಂಡಿಯನ್ ಟೆಕ್ನಿಕಲ್ ಎಜುಕೇಶನ್ ಬೋರ್ಡ್ ಮುಂಬೈ (ಐಟಿಇಎಸ್) ಇದರಿಂದ ಮಾನ್ಯತೆ ಪಡೆದು ಕಳೆದ ಐದು ವರ್ಷಗಳಿಂದ ಬೆಳ್ತಂಗಡಿಯಲ್ಲಿ ತಾಂತ್ರಿಕ ಮತ್ತು ವೃತ್ತಿ ತರಬೇತಿ ನೀಡುತ್ತಿರುವ ತಾಲೂಕಿನ ಮೊಟ್ಟಮೊದಲ ಫ್ಯಾಶನ್ ಡಿಸೈನ್ ಕಾಲೇಜು ಅನುಗ್ರಹ ಟ್ರೈನಿಂಗ್ ಕಾಲೇಜಿಗೆ ಐಟಿಇಎಸ್ ಮುಂಬೈ ಸಂಸ್ಥೆಯಿಂದ ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್ ನೀಡಿ ಪುರಸ್ಕರಿಸಿದೆ. ಐಟಿಇಎಸ್ ಸಂಸ್ಥೆಯ ವತಿಯಿಂದ ನಡೆದ 2017-18 ಸಾಲಿನಲ್ಲಿ ಆಲ್ ಇಂಡಿಯಾ ಎಕ್ಸಾಮಿನೇಶನ್‌ನಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಮೂಡಿಬಂದಿರುವ ಮೆರಿಟಾ ಪ್ರಿಯಾ ಅವರಿಗೆ ನಗದು ಪುರಸ್ಕಾರವನ್ನೂ ನೀಡಿದೆ.
ಅ. 6 ರಂದು ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಐಟಿಇಎಸ್ ಬೋರ್ಡ್ ಮುಂಬೈ ಇದರ ಅದ್ಯಕ್ಷ ಪಾಂಡುರಂಗ ನಾಯಕ್, ಪರಿಸರ ಸ್ನೇಹಿ ಮತ್ತು ಸಾಮಾಜಿಕ ಕಾರ್ಯಕರ್ತ ದಿನೇಶ್ ಹೊಳ್ಳ, ಪ್ರ. ಕಾರ್ಯದರ್ಶಿ ಗೋಯಲ್, ಸಮಿತಿಯ ಹಿರಿಯ ಸದಸ್ಯ ಸದಾನಂದ ಹಾಗೂ ಬೋರ್ಡ್ ಸದಸ್ಯರುಗಳ ಸಮ್ಮುಖ ಅನುಗ್ರಹ ಸಂಸ್ಥೆಯ ಚೇರ್‌ಮೆನ್ ತಲ್‌ಹತ್ ಎಂ.ಜಿ, ಟ್ರಸ್ಟಿ ಮುನೀರಾ ಕೆ.ವೈ, ಕಾಲೇಜು ಪ್ರಾಂಶುಪಾಲ ಜೈಸನ್ ಪಿ, ಆಡಳಿತ ಮಂಡಳಿ ಸದಸ್ಯರುಗಳಾದ ಜಿ ಇಸುಬು, ಮುಹಮ್ಮದ್ ಅಶ್ರಫ್ ಹಾಗೂ ವಿದ್ಯಾರ್ಥಿನಿ ಮೆರಿಟ ಪ್ರಿಯಾ ಮತ್ತು ಅವರ ಪೋಷಕರು ಈ ಪುರಸ್ಕಾರ ಸ್ವೀಕರಿಸಿದರು.
ಅನುಗ್ರಹ ಟ್ರೈನಿಂಗ್ ಕಾಲೇಜು ಈಗಾಗಲೇ 10 ನೇ ತರಗತಿ, ಪಿಯುಸಿ ಹಾಗೂ ಬೇರೆ ಬೇರೆ ವಿದ್ಯಾಬ್ಯಾಸಗಳಲ್ಲಿ ಪಾಸ್ ಅಥವಾ ಪೈಲ್ ಆದ ವಿದ್ಯಾರ್ಥಿಗಳಿಗೆ ವೃತ್ತಿ, ತಾಂತ್ರಿಕ ಮತ್ತು ಸ್ವ ಉದ್ಯೋಗ ತರಬೇತಿ ನೀಡಿ ಎಲ್ಲರನ್ನು ಉದ್ಯೋಗಿಗಳನ್ನಾಗಿ ಮಾಡುವ ಅತ್ಯುತ್ತಮ ದ್ಯೇಯದೊಂದಿಗೆ ಕೆಲಸ ನಿರ್ವಹಿಸುತ್ತಿದೆ. ಸದ್ರಿ ಕಾರ್ಯಕ್ರಮದಲ್ಲಿ ಅನುಗ್ರಹ ಮಾತ್ರವಲ್ಲದೆ ಐಟಿಇಎಸ್ ಮಾನ್ಯತೆ ಪಡೆದ ದಕ್ಷಿಣ ಕನ್ನಡ ಮತ್ತು ಉಡುಪಿ, ಕಾಸರಗೋಡ್ ಜಿಲ್ಲೆಯ ಐ. ಟಿ. ಐ. ಮತ್ತು ಡಿಪ್ಲೋಮಾ ಕಾಲೇಜುಗಳ ಪ್ರಾಂಶುಪಾಲರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಳ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.