
ಉಜಿರೆ: ಉಜಿರೆಯ ಎಸ್.ಡಿ.ಎಮ್ ಪ.ಪೂ ಕಾಲೇಜಿನ ಸಂಸ್ಕೃತ ವಿಭಾಗದ ಸಂಸ್ಕೃತ ಸಂಘವು ಜಲಸಂರಕ್ಷಣೆಯ ಬಗ್ಗೆ ಪ್ರಕಟಿಸಿದ ‘ ಜಲಂ ಹಿ ಜೀವನಮ್’ ಸ್ಟಿಕ್ಕರನ್ನು ಉಜಿರೆಯ ಎಸ್. ಡಿ.ಎಮ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಯಶೋವರ್ಮರವರು ಬಿಡುಗಡೆಗೊಳಿಸಿದರು.
ಎಸ್. ಡಿ.ಎಮ್ ಪದವಿ ಕಾಲೇಜಿನ ಪ್ರಾಚಾರ್ಯ ಕೇಶವ್, ಪ.ಪೂ ಕಾಲೇಜಿನ ಪ್ರಾಚಾರ್ಯ ಪ್ರೊ. ದಿನೇಶ್ ಚೌಟ, ಪ್ರಾಯೋಜಕರಾದ ಡಿ. ನೆಟ್ ಹಾಗೂ ಏರೋ ಡಿಜಿಟಲ್ ಸರ್ವಿಸಸ್ ಸಂಸ್ಥೆಗಳ ಮುಖ್ಯಸ್ಥ ಅಕ್ಷಯ್ . ಎ., ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ.ಪ್ರಸನ್ನಕುಮಾರ್ ಐತಾಳ್ ,ಸಂಸ್ಕೃತ ಸಂಘದ ಅಧ್ಯಕ್ಷ ಶ್ರೇಯಸ್ ಪಾಳಂದೆ ಉಪಸ್ಥಿತರಿದ್ದರು.