ಧರ್ಮಸ್ಥಳ: ನೇತ್ರಾವತಿ ನದಿಯ ಧರ್ಮಸ್ಥಳ ಸ್ನಾನ ಘಟ್ಟದ ಬಳಿ ಅಪರಿಚಿತ ವ್ಯಕ್ತಿಯ ಮೃತದೇಹವು ಅ.5 ರಂದು ಪತ್ತೆಯಾಗಿದೆ. ಅಂದಾಜು 50 ರಿಂದ 55ರ ವಯಸ್ಸಿನ ಗಂಡಸಿನ ಶವವಾಗಿದ್ದು, ಸ್ನಾನಘಟ್ಟದಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಕಾಲುಜಾರಿ ಮೃತಪಟ್ಟಿರಬಹುದು. ಇಲ್ಲವೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.