ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ದಶಲಕ್ಷಣಪರ್ವ ಆಚರಣೆ

ಧರ್ಮಸ್ಥಳ: ದಶಲಕ್ಷಣಪರ್ವ ಆಚರಣೆಯ ಸಂದರ್ಭ ಪೂಜಾ ಕಾರ್ಯಕ್ರಮವು ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ದಶಧರ್ಮಗಳ ಆಚರಣೆ ಮತ್ತು ಅದರ ಮಹತ್ವದ ಕುರಿತಾಗಿ ಮತ್ತು ಧಾರ್ಮಿಕ ಉಪನ್ಯಾಸವನ್ನು ಶ್ರೀಮತಿ ಹೇಮಾವತಿ.ವಿ. ಹೆಗ್ಗಡೆಯವರು ಉಪಕಥೆಗಳ ಮೂಲಕ ಸವಿವರವಾಗಿ ತಿಳಿಸಿದರು.

ದಶಧರ್ಮಗಳಾದ ಉತ್ತಮ ಕ್ಷಮ, ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ, ಉತ್ತಮ ಬ್ರಹ್ಮಚರ್ಯ ಧರ್ಮಗಳ ಪೂಜೆಗಳನ್ನು ಮಾಡುವುದು ಮಾತ್ರವಲ್ಲ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಊರ ಶ್ರಾವಕ ಶ್ರಾವಕಿಯರು ಪುಣ್ಯಭಾಗಿಗಳಾದರು. ಶ್ರೀಮತಿ ಸೌಮ್ಯ ಸ್ವಾಗತಿಸಿ, ಶ್ರೀಮತಿ ಪದ್ಮಾ ರಾಕೇಶ ವಂದಿಸಿ, ಶ್ರೀಮತಿ ಸಾವಿತ್ರಿ ಪುಷ್ಪದಂತ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.