ತೂಗು’ವ ಬಾಳಿಗೆ ಗೌಡರ ಸೇ(ತು)ವೆಯ ಆಸರೆ…

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಯ್ಯೂರುಬೆಳ್ತಂಗಡಿ ಕಸಬಾ ಗ್ರಾಮವನ್ನು ತುಂಡರಿಸುವ ನೆಕ್ಕರೆಕೋಡಿ ಅರ್ಪಳ ಓಡದ ಕಡಪು ಪ್ರದೇಶದ ಸನಿಹ ಸೋಮಾವತಿ ನದಿ ದಾಟಬೇಕಾದರೆ ಇದೀಗ ನೆಕ್ಕರೆಕೋಡಿ ಕೂಸಪ್ಪ ಗೌಡರು ಸ್ವಂತ ಖರ್ಚಿನಿಂದ ನಿರ್ಮಿಸಿದ ತೂಗು ಸೇತುವೆಯೇ ಆಸರೆ.
ಮೆಸ್ಕಾಂ ಇಲಾಖೆಯ ನಿವೃತ್ತ ಜೆ.ಇ ಕೂಸಪ್ಪ ಗೌಡರು ಸುಮಾರು 20 ಲಕ್ಷ ರೂ. ಸ್ವಂತ ಖರ್ಚಿನಿಂದ ಇಲ್ಲಿ ನಿರ್ಮಿಸಿರುವ ತೂಗು ಸೇತುವೆ ಸುರಕ್ಷಿತ ನದಿ ದಾಟುವಾಗಿ ರೂಪಿತಗೊಂಡಿದೆ. ಮಾತ್ರವಲ್ಲದೆ ಇಲ್ಲಿ ಉದ್ದಕ್ಕೆ ನೀರು ಶೇಖರಣೆಗೊಂಡು ಚಲಿಸುವ ನೀರಿಗೆ ಒಡ್ಡು ನಿರ್ಮಿಸಿದ ರೀತಿಯ ಸುಂದರ ನೋಟಕ್ಕೆ ಸಾಕ್ಷಿಯಾಗಿರುವ ಇಲ್ಲಿನ ಸುಂದರ ಪ್ರಕೃತಿ ರಮಣೀಯತೆ ಸವಿಯಲು ಈ ತೂಗು ಸೇತುವೆ ಒಂದರ್ಥದಲ್ಲಿ ತೂಗುಯ್ಯಾಲೆಯಂತೆಯೂ ಭಾಸವಾಗುತ್ತಿದೆ.
ತೂಗು ಸೇತುವೆಗಳ ಜನಕ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರಧ್ವಾಜ್ ಸುಳ್ಯ ಅವರ ಮಾರ್ಗದರ್ಶನದಲ್ಲಿ ಅವರ ಪುತ್ರ ಪತಂಜಲಿ ಭಾರಧ್ವಾಜ್ ಅವರನ್ನೊಳಗೊಂಡ 17 ಮಂದಿ ತಂತ್ರಜ್ಞರ ತಂಡ ಸೋಮಾವತಿ ನದಿಯ ಮೇಲೆ ೫೮ ಮೀಟರ್ ಉದ್ದಕ್ಕೆ ಈ ತೂಗು ಸೇತುವೆ ನಿರ್ಮಿಸಿದ್ದಾರೆ. ವೈಯುಕ್ತಿಕವಾಗಿ ನಿರ್ಮಾಣಗೊಂಡಿರುವ ತೂಗು ಸೇತುವೆಗಳ ಪೈಕಿ ಈ ಸೇತುವೆ ಅತೀ ಉದ್ದದ್ದು ಎಂಬುದು ಅವರ ವರದಿ. ಇದನ್ನು ಕೂಸಪ್ಪ ಗೌಡರು ತಮ್ಮ ವೈಯುಕ್ತಿಕ ಉಪಯೋಗಕ್ಕೆ ನಿರ್ಮಿಸಿಕೊಂಡಿದ್ದಾರಾದರೂ ಈಗ ಅವರ ಕುಟುಂಬ ಮಾತ್ರವಲ್ಲದೆ ಸ್ಥಳೀಯ ವಿಶ್ವಸಿತ ನಾಗರಿಕರಿಗೆ ಇದು ಉಪಯೋಗವಾಗುತ್ತಿದೆ. ಈ ಸೇತುವೆ ಮೂಲಕ ದಾಟಿದರೆ ಕೊಯ್ಯೂರು ಮಾವಿನಕಟ್ಟೆ ಎಂಬಲ್ಲಿಂದ ಸುತ್ತಿ ಬಳಸಿ ಸುಮಾರು 18 ಕಿ. ಮೀಟರ್ ದೂರದಿಂದ ಬೆಳ್ತಂಗಡಿ ನಗರ ಕೇಂದ್ರಕ್ಕೆ ಸಂದಿಸಬೇಕಾದ ಹಾದಿಯನ್ನು ಸುಗಮಗೊಳಿಸಿ ಕೇವಲ 4 ಕಿ. ಮೀಟರ್ ಅಂತರದಲ್ಲೆ ನಗರ ತಲುಪುತ್ತದೆ.
50 ಜನರ ಸಾಮರ್ಥ್ಯ, 50 ವರ್ಷಗಳ ಗ್ಯಾರೆಂಟಿ :
ಈಗ ನಿರ್ಮಿಸಿದ ತೂಗು ಸೇತುವೆಯಲ್ಲಿ 50 ಜನರು ಏಕ ಕಾಲದಲ್ಲಿ ಹಾದುಹೋಗುವ ಸಾಮರ್ಥ್ಯ ಇದೆ. ೫೦ ವರ್ಷಗಳ ಗ್ಯಾರೆಂಟಿಯನ್ನೂ ನಿರ್ಮಾಣ ಸಂಸ್ಥೆ ಘೋಷಿಸಿದೆ. ವರ್ಷಕ್ಕೊಮ್ಮೆ ಪೈಂಟಿಂಗ್, ರೋಪ್ ಮೇಲೆ ಗ್ರೀಸ್ ಹಚ್ಚುವ ಮೆಂಟೆನೆನ್ಸ್ ಕಾರ್ಯ ಇವರೇ ಮಾಡಬೇಕು. ಸೇತುವೆ ನಿರ್ಮಾಣಕ್ಕೆ 15 ಲಕ್ಷ ರೂ. ನಿರ್ಮಾಣ ಕಂಪೆನಿಗೆ ಪಾವತಿಸಲಾಗಿದ್ದು, ಪಿಲ್ಲರ್, ಬೆಡ್ಡ್ ನಿರ್ಮಾಣಕ್ಕೆ ಜಲ್ಲಿ, ಮರಳು, ಸಿಮೆಂಟ್ ಇವರೇ ನೀಡಿದ್ದಾರೆ. ಬೆಳ್ತಂಗಡಿ ನಗರದ ಕಡೆಯಿಂದ ಅರಣ್ಯಕ್ಕೆ ಸೇರಿದ ಜಾಗವಾಗಿರುವುದರಿಂದ ಇಲಾಖೆಯಿಂದ ವಿರೋಧ ಇತ್ತು. ಬಳಿಕ ಅವರ ಗುಪ್ಪೆಯಿಂದ ಹೊರಕ್ಕೆ ಬರುವಂತೆ ಹಿಂದೆ ಇದ್ದ ಮಣ್ಣಿನ ಹಳೆಯ ರಸ್ತೆಯ ಪಥ ಬದಲಿಸಲಾಗಿದೆ.
ತೂಗು ಸೇತುವೆಗೂ ಮುನ್ನ ಬಿದಿರಿನ ತೆಪ್ಪ, ತೊಟ್ಟಿಲು ಆಸರೆ:
ಸೇತುವೆ ನಿರ್ಮಾಣಕ್ಕೂ ಮುನ್ನ ಇಲ್ಲಿ ಕೂಸಪ್ಪ ಗೌಡರು ಬಿದಿರಿನ ತೆಪ್ಪ ನಿರ್ಮಿಸಿ ನದಿ ದಾಟಲು ವ್ಯವಸ್ಥೆ ಮಾಡಿಕೊಂಡಿದ್ದರು. ಮಹಿಳೆಯರೂ ಕೂಡ ಇದನ್ನು ಉಪಯೋಗಿಸುವಂತಿತ್ತು. ಬಳಿಕ ಕಬ್ಬಿಣದ ರೋಪ್ ಮೇಲೆ ತೊಟ್ಟಿಲು ನಿರ್ಮಿಸಿ ಅದನ್ನೂ ಬಳಸುತ್ತಿದ್ದರು. ಸಾಧಾರಣ ಈ ದಾಟು ವಿನಲ್ಲಿ ಮಾರ್ಚ್ ವರೆಗೂ ನೀರು ಇರುತ್ತಿದ್ದು ಮೂರ್‍ನಾಲ್ಕು ಆಳು ಆಳ ಕೂಡ ಇದೆ ಎನ್ನುತ್ತಾರೆ ಅವರು.

1997  ರಲ್ಲಿ ನಾನು ಇಲ್ಲಿ ಜಾಗ ಖರೀದಿಸಿದೆ. ಆಗ ಇದು ದೊಡ್ಡ ಅರಣ್ಯ ಪ್ರದೇಶದಂತಿತ್ತು. ಮೆಸ್ಕಾಂ ಇಲಾಖೆಯಲ್ಲಿ ಕೆಲಸದಲ್ಲಿದ್ದ ನಾನು ಕಛೇರಿ ರಜಾ ದಿನಗಳಲ್ಲಿ ಕಠಿಣ ಪರಿಶ್ರಮದಿಂದ ದುಡಿದು ಪತ್ನಿ ಮಕ್ಕಳ ಸಹಕಾರದಿಂದ ಕೃಷಿ ಮಾಡಿದ್ದೇನೆ. ನೆಕ್ಕರೆಕೋಡಿ ಈ ಪ್ರದೇಶ ಮೂಲ ಭೂತ ಸೌಲಭ್ಯಗಳಿಂದ ವಂಚಿತವಾಗಿತ್ತು. ಮಳೆಗಾಲ ದಲ್ಲಿ ಹೊಳೆಯಲ್ಲಿ ನೀರು ಬಂದರೆ ದ್ವೀಪದಂತೆ ಆಗುತ್ತಿತ್ತು ನಮ್ಮ ಮನೆ. ಓಡದ ಕಡಪು ಭಾಗದಲ್ಲಿ ನದಿ ತೆಪ್ಪದ ಮೂಲಕ ನದಿ ದಾಟಿ ಇಲ್ಲಿಗೆ ಬರುವ ಸ್ಥಿತಿ ಇತ್ತು.ಕೂಸಪ್ಪ ಗೌಡ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.