ವೇಣೂರು ದೇವಸ್ಥಾನ : ತಾಂಬೂಲ ಪ್ರಶ್ನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಅಜಿಲಸೀಮೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಹಿನ್ನೆಲೆಯಲ್ಲಿ ತಾಂಬೂಲಪ್ರಶ್ನೆಯು ವಿದ್ವಾನ್ ಶ್ರೀಧರ ಗೋರೆ ಅವರ ನೇತೃತ್ವದಲ್ಲಿ ಅ.1ರಂದು ದೇವಸ್ಥಾನದಲ್ಲಿ ಜರಗಿತು.
ಈ ವೇಳೆಯಲ್ಲಿ ದೇವಸ್ಥಾನದ ಗುಡಿಗೋಪುರಗಳ ಪ್ರತಿಷ್ಠಾಪನೆ ಮತ್ತು ನಿರ್ಮಾಣದ ಬಗ್ಗೆ ಪ್ರಶ್ನಾಚಿಂತನೆ ನಡೆಸಲಾಯಿತು. ದೇವಸ್ಥಾನದ ಸಮಿತಿ ಸದಸ್ಯರ ಹಾಗೂ ಭಕ್ತಾಧಿ ಸಾರ್ವಜನಿಕರ ಜಿಜ್ಞಾಸೆಗೆ ವಾಸ್ತು ಹಾಗೂ ಪೂಜಾ ವೈಶಿಷ್ಠ್ಯಗಳ ಮೂಲಕ ಪರಿಹಾರ ಸೂಚಿಸಿದರು. ಭಕ್ತಾಧಿಗಳ ಆಶಯದಂತೆ ಶೀಘ್ರ ಜೀರ್ಣೋದ್ಧಾರ ಕಾರ್ಯ ನೆರವೇರುವುದಾಗಿ ಅವರು ತಿಳಿಸಿದರು.
ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ್ ಅಜಿಲ, ಶಿವಪ್ರಸಾದ್ ಅಜಿಲ, ದೇವಸ್ಥಾನದ ವ್ಯವಸ್ಥಾಪನ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಮಾಗಣೆ ಗುರಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.