ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಛಾಯಾಗ್ರಾಹಕ ಸಂಘದ ಮಹಾಸಭೆ

ಸಮಾಜದ ಕುಂದು ಕೊರತೆ ಎತ್ತಿ ಹಿಡಿಯುವಲ್ಲಿ ಛಾಯಗ್ರಾಹಕರ ಪಾತ್ರ ಮಹತ್ತರ ಸಮಾಜಕ್ಕೆ ಒಳಿತು ಬಯಸಿ ಸಮಾಜಮುಖಿ ಕೆಲಸ ಮಾಡಿದರೆ ಅದುವೆ ನಮಗೆ ರಕ್ಷಣೆ ನೀಡುತ್ತದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಸೆ. 30 ರಂದು ಮಡಂತ್ಯಾರ್ ಚರ್ಚ್ ಹಾಲ್‌ನಲ್ಲಿ ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ 28 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು ಜಿಲ್ಲಾಧ್ಯಕ್ಷರಾದ ವಿಲ್ಸನ್ ಜಾರ್ಜ್ ಗೊನ್ಸಾಲ್ವಿಸ್ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಚರ್ಚಿನ ದರ್ಮಗುರುಗಳು ವಂ. ಫಾದರ್ ಬೇಸಿಲ್ ವಾಸ್. ಕರ್ನಾಟಕ ಫೋಟೊಗ್ರಾಫರ್ಸ್ ಸಂಘದ ಉಪಾಧ್ಯಕ್ಷ ನಾಗೇಶ್. ಎಸ್.ಕೆ.ಪಿ.ಎ. ವಿವಿದೋಧ್ಧೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್ ಸಲಹಾ ಸಮಿತಿ ಅಧ್ಯಕ್ಷ ವಿಠಲ ಚೌಟ ಆಗಮಿಸಿದ್ದರು ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ. ಕೋಶಾಧಿಕಾರಿ ಶ್ರೀಧರ್ ಶೆಟ್ಟಿಗಾರ್. ಉಪಾಧ್ಯಕ್ಷರು ಪ್ರಮೋದ್ ಸುವರ್ಣ. ಸುದೀರ್ ಶೆಟ್ಟಿ ಹಾಗೂ 14 ವಲಯದ ಅಧ್ಯಕ್ಷರುಗಳು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಎಸ್.ಕೆ.ಪಿ.ಎ. ಹ್ಯಾಪ್ ಬಿಡುಗಡೆ ಮಾಡಲಾಯಿತು ಬೆಳ್ತಂಗಡಿ ವಲಯದ ಸದಸ್ಯ ಗಣೇಶ್ ಹೆಗ್ಡೆ ಪ್ರಾರ್ಥನೆ ಗೈದರು ಉಪಾಧ್ಯಕ್ಷ ಸುದೀರ್ ಸ್ವಾಗತಿಸಿ ಎಚ್.ಕೆ. ನಯಾನಾಡು ಕಾರ್ಯಕ್ರಮ ನಿರೂಪಿಸಿದರು ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ ಧನ್ಯವಾದ ವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.