ಉನ್ನಿಕೃಷ್ಣನ್ ಕೊಲೆ: ಆರೋಪಿಗಳಿಬ್ಬರ ಬಂಧನ

ಕುಪ್ಪೆಟ್ಟಿ: ಕೇರಳದ ಎರ್ನಾಕುಲಂ ನಿವಾಸಿ ಉನ್ನಿಕೃಷ್ಣನ್ ಎಂಬವರನ್ನು ಕೊಲೆಗೈದು ಕುಪ್ಪೆಟ್ಟಿಯ ಹೊಳೆಯಲ್ಲಿ ಎಸೆದು ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ದ.ಕ. ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಪಲ್ಲಿತ್ತಾಯ ತಾಲೂಕಿನ ಎಲಿಯಟೈಲ್ ನಿವಾಸಿ ಜೀತು ಸಾಜಿ(23 ವ) ಹಾಗೂ ಎರ್ನಾಕುಲಂನ ತಾಯಕಟ್ಟಕೆರೆ ತಾಲೂಕಿನ ಕುಂಗತ್ತಿ ಪರಂಬಿಲ್ ನಿವಾಸಿ ಸುಹೈಲ್ ನಝರ್(22ವ) ಬಂಧಿತ ಆರೋಪಿಗಳಾಗಿದ್ದಾರೆ. ಅ.೧ರಂದು ಮಂಜೇಶ್ವರದ ರೈಲ್ವೇ ನಿಲ್ದಾಣದ ಬಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಕಳೆದ ಸೆ.3ರಂದು ಕುಪ್ಪೆಟ್ಟಿ ಸೇತುವೆ ಬಳಿ ಉನ್ನಿಕೃಷ್ಣನ್‌ರವರ ಮೃತ ದೇಹ ಪತ್ತೆಯಾಗಿತ್ತು. ಇದರ ಬಗ್ಗೆ ತನಿಖೆ ನಡೆಸಿದ ಪೊಲೀಸರು ಇದೊಂದು ವ್ಯವಸ್ಥಿತ ಕೊಲೆ ಎಂದು ಕೇಸು ದಾಖಲಿಸಿಕೊಂಡು ತನಿಖೆ ನಡೆಸಿ ಎರ್ನಾಕುಲಂ ಜಿಲ್ಲೆಯ ಔರಂಗಝೀಬ್, ಮಹಮ್ಮದ್ ಶಮನಾಝ್ ಇವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಜಾಗದ ವಿಷಯದಲ್ಲಿ ಕೇರಳದ ರೌಡಿ ಅನಾಸ್‌ಗೆ ರೂ.25 ಲಕ್ಷ ಬರಲು ಬಾಕಿಯಿದ್ದು, ಇದರ ವಸೂಲಿಗಾಗಿ ಉಣ್ಣಿಕೃಷ್ಣನ್ ಸೇರಿ ನಾಲ್ಕು ಮಂದಿ ಆ.3 ರಂದು ಇನ್ನೋವಾ ಕಾರಿನಲ್ಲಿ ಉಪ್ಪಿನಂಗಡಿಗೆ ಬಂದು ಇಲ್ಲಿಯ ಲಾಡ್ಜ್‌ನಲ್ಲಿ ತಂಗಿ ಸೆ.1 ರಂದು ನೆಲ್ಯಾಡಿ ಕಡೆಗೆ ಹೋಗಿ ಬರುವಾಗ ಎದುರಿನ ಸಿಟಿನಲ್ಲಿ ಕುಳಿತ್ತಿದ್ದ ಉಣ್ಣಿಕೃಷ್ಣನ್‌ರನ್ನು ನೈಲಾನ್ ಹಗ್ಗದಿಂದ ಬಿಗಿದು, ಚೂರಿಯಿಂದ ತಿವಿದು ಕೊಲೆಗೈದು ಮೃತದೇಹವನ್ನು ಕುಪ್ಪೆಟ್ಟಿ ಸೇತುವೆ ಕೆಳಗೆ ಹೊಳೆಯಲ್ಲಿ ಎಸೆದು ಹೋಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.