HomePage_Banner_
HomePage_Banner_
HomePage_Banner_

ಬೆಂಗಳೂರು ತುಳುಕೂಟದಿಂದ ‘ಪುದ್ದಾರ್ ವಣಸ್’ ಕಾರ್ಯಕ್ರಮ

Advt_NewsUnder_1

ಬೆಳ್ತಂಗಡಿ : ಕೊಕ್ರಾಡಿಯ ದೇವೇಂದ್ರ ಹೆಗ್ಡೆ ಪ್ರಧಾನ ಕಾರ್ಯದರ್ಶಿಯಾಗಿರುವ ತುಳುಕೂಟ ಬೆಂಗಳೂರು ಇದರ ವತಿಯಿಂದ ಕರಾವಳಿಯ ಸಾಂಪ್ರದಾಯಿಕ ಹಾಗೂ ಸಂಸ್ಕೃತಿಯ ಪ್ರತೀಕವಾದ ಪುದ್ದಾರ್ ವಣಸ್ (ಹೊಸಅಕ್ಕಿ ಊಟ) ಕಾರ್ಯಕ್ರಮವವು ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿತು.
ಕರಾವಳಿ ಪ್ರದೇಶದಲ್ಲಿ ಗಣೇಶ ಚತುರ್ಥಿಯಿಂದ ನವರಾತ್ರಿಯ ಮಧ್ಯಭಾಗದಲ್ಲಿ ಹೊಸದಾಗಿ ಬೆಳೆದ ಸುಗ್ಗಿಯ ಮೊದಲ ಪೈರು (ತೆನೆ) ಮನೆಗೆ ತಂದು, ಪೂಜೆ ಮಾಡುತ್ತಾರೆ. ನಂತರದ ಅದರಿಂದ ಅನ್ನ ಸಿದ್ದಪಡಿಸಿ ಕುಟುಂಬದವರು, ಸ್ನೇಹಿತರು ಸೇರಿ ಹೊಸ ಅಕ್ಕಿ ಊಟ ಮಾಡುವ ಸಂಪ್ರದಾಯವಿದೆ. ಅದನ್ನು ತುಳುಕೂಟದಿಂದ ಬೆಂಗಳೂರಿನಲ್ಲಿ ವಿಶೇಷವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ಪಿ.ಸಿ.ಮೋಹನ್, ಉದ್ಯಮಿ ಗುರ್ಮೇ ಸುರೇಶ್ ಶೆಟ್ಟಿ, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು, ತುಳುಕೂಟದ ಬೆಂಗಳೂರು ಅಧ್ಯಕ್ಷ ಜಿ. ದಿನೇಶ್ ಹೆಗ್ಡೆ ಸೇರಿದಂತೆ ತುಳು ಬಾಂಧವರು ಕುಚ್ಚಲಕ್ಕಿ ಅನ್ನ, ತಿಮರೆ ಚಟ್ನಿ, ನೀರ್ ಕುಕ್ಕು, (ನೀರಿನಲ್ಲಿಟ್ಟ ಮಾವು) ಚಟ್ನಿ, ಪೆಲಕಾಯಿ ಉಪ್ಪಡ್ (ಹಲಸಿನ ಕಾಯಿ), ಬಾಳೆ ದಂಟಿನ ಚಟ್ನಿ, ಕಡಲೆ ಬೇಳೆ ಪಾಯಸ ಸೇರಿದಂತೆ 14 ಬಗೆಯ ಖಾದ್ಯಗಳನ್ನು ಮಾಡಿ, ಹೊಸ ಪೈರಿನೊಂದಿಗೆ ವಿತರಿಸಲಾಯಿತು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.