HomePage_Banner_
HomePage_Banner_
HomePage_Banner_

ಭಾರತೀಯ ಜೈನ್ ಮಿಲನ್: ಪುದುವೆಟ್ಟು ಶಾಲೆಗೆ ನೀರಿನ ಫಿಲ್ಟರ್ ಕೊಡುಗೆ

Advt_NewsUnder_1

ಪುದುವೆಟ್ಟು : ಡಾ| ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಅಂಗವಾಗಿ ಭಾರತೀಯ ಜೈನ್ ಮಿಲನ್ ವತಿಯಿಂದ ಪಟ್ಟಾಭಿ ಷೇಕದ ಸವಿನೆನಪಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಶ್ರೀ ಮಂಜು ನಾಥೇಶ್ವರ ಹಿ.ಪ್ರಾ.ಶಾಲೆ ಪುದುವೆಟ್ಟು ಇಲ್ಲಿಗೆ ಕೊಡುಗೆಯಾಗಿ ಅ.2 ರಂದು ನೀಡಲಾಯಿತು.
ನಿವೃತ್ತ ಬ್ಯಾಂಕ್ ಅಧಿಕಾರಿ ಧರ್ಮರಾಜ್ ಮತ್ತು ಶ್ರೀಮತಿ ವಲಮಾಲ ಹಾಗೂ ಮಕ್ಕಳ ಸೇವಾರ್ಥವಾಗಿ ರೂ.೨೦ ಸಾವಿರ ಮೌಲ್ಯದ ಶುದ್ಧ ಕುಡಿಯುವ ನೀರಿನ ಘಟಕವನ್ನು, ಸರಳ ಸಮಾರಂಭದಲ್ಲಿ, ಶಾಲಾ ಮುಖ್ಯ ಶಿಕ್ಷಕ ವಸಂತ ರಾವ್ ಮತ್ತು ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ, ಪೋಷಕರ ಸಮುಖದಲ್ಲಿ ಹಸ್ತಾಂತರಿಸಿದರು.
ಭಾರತೀಯ ಜೈನ್ ಮಿಲನ್ ಕಾರ್ಯದರ್ಶಿ ಮುನಿರಾಜ ಅಜ್ರಿ, ಜೈನ್ ಮಿಲನ್ ಸೇವಾ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರದ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ನಿವೃತ್ತ ಶಿಕ್ಷಕ ಸೋಮಶೇಖರ ಶೆಟ್ಟಿ ವಹಿಸಿದ್ದರು. ಭಾರತೀಯ ಜೈನ್ ಮಿಲನ್‌ವತಿಯಿಂದ ಡಾ| ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ೫೦ನೇ ವರ್ಷಚರಣೆಯ ಅಂಗವಾಗಿ ರಾಜ್ಯಾದಂತ ಸಸಿ ವಿತರಣೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕವನ್ನು ನೀಡಲಾಗುತ್ತದೆ ಎಂದರು.
ಶಾಲಾ ಮುಖ್ಯ ಶಿಕ್ಷಕರು ನೀರಿನ ಘಟಕ ನೀಡಿದ ಧರ್ಮರಾಜ್ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದರು. ನಂತರ ಶಾಲಾ ವತಿಯಿಂದ ಶ್ರೀಮತಿ ವನಮಾಲ ಧರ್ಮರಾಜ್ ದಂಪತಿಗಳಿಗೆ ಸನ್ಮಾನಿಸ ಲಾಯಿತು. ವೇದಿಕೆಯಲ್ಲಿ ಜೈನ್ ಮಿಲನ್ ಅಧ್ಯಕ್ಷ ಪಾರ್ಶ್ವನಾಥ ಜೈನ್, ಎಸ್.ಡಿ.ಎಂ.ಸಿ ಅಧ್ಯಕ್ಷ ರೋಯಿ ಜೋಸೆಫ್, ಎ.ಪಿ.ಎಂ.ಪಿ ಸದಸ್ಯ ಅಬ್ದುಲ್ ಗಫೂರ್, ಶಿಕ್ಷಕ ಪದ್ಮರಾಜ್ ಜೈನ್, ನಿಶ್ಚಿತ್, ಅಜಯ್, ದೀಪಕ್ ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕ ಜೋಸೆಫ್ ಸ್ವಾಗತಿಸಿ, ಶಿಕ್ಷಕ ನಿಶಾಂತ್ ಕುಮಾರ್ ನಿರೂಪಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.