ಬಂಗಾಡಿ: ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಇವರ ವತಿಯಿಂದ ತುಳುಭಾಷಾ ಖ್ಯಾತ ಪ್ರಸಂಗಕರ್ತ, ಸಾಹಿತಿ ಕೆ. ಅನಂತರಾಮ ಬಂಗಾಡಿ ಯವರಿಗೆ ಯಕ್ಷದೇವ ಪ್ರಶಸ್ತಿ ಘೋಷಣೆಯಾಗಿದೆ. ಅ.7 ರಂದು ಮೂಡಬಿದಿರೆ ಪದ್ಮಾವತಿ ಕಲಾಮಂಟಪದಲ್ಲಿ ನಡೆಯಲಿರುವ 21ನೇ ವರ್ಷದ ‘ಯಕ್ಷೋಚ್ಛಯ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪಡೆಯಲಿದ್ದಾರೆ. ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವರವರು ಇವರಿಗೆ ಯಕ್ಷದೇವ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ವಿನಯಹೆಗ್ಡೆ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಅಕಾಡೆಮಿ ರಿಜಿಸ್ಟಾರ್ ಚಂದ್ರಹಾಸ ರೈ, ಎಸ್.ಕೆ.ಎಸ್ ರಾಮಕೃಷ್ಣ ಆಚಾರ್ಯ ಭಾಗವಹಿಸಲಿದ್ದಾರೆ.