ಅ.6-12: ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜು ಹಳೆಕೋಟೆ  ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರವು  ಅ.6 ರಿಂದ 12ರವರೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೊಳ್ಮನಾರು, ಪುದುವೆಟ್ಟು ಇಲ್ಲಿ ನಡೆಯಲಿದೆ.

ಅ.6 ರಂದು ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಲಿದ್ದಾರೆ. ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಸೋಮೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರತಿದಿನ ಮಧ್ಯಾಹ್ನದವರೆಗೆ ನಡೆಯುವ ಶ್ರಮದಾನದಲ್ಲಿ ಆಟದ ಮೈದಾನ ವಿಸ್ತರಣೆ, ಇಂಗುಗುಂಡಿ ರಚನೆ, ಸಸಿ ನೆಡುವುದು, ಶಾಲಾ ಆವರಣ ಸ್ವಚ್ಛತೆ ಹಾಗೂ ಕೃಷಿ ಮಾಹಿತಿ ಸಂಗ್ರಹ, ಪ್ಲಾಸ್ಟಿಕ್ ನಿರ್ಮೂಲನ ಅಭಿಯಾನ ಮುಂತಾದ ಚಟುವಟಿಕೆಗಳು ನಡೆಯಲಿದೆ. ಅಪರಾಹ್ನ ಶಿಬಿರಾರ್ಥಿಗಳಿಗೆ ನಡೆಯುವ ಶೈಕ್ಷಣಿಕ ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಗಾರ, ಅಭಿನಯಕಲೆ, ಸೇವೆ ಮತ್ತು ಮೌಲ್ಯ, ವಿಪತ್ತು ನಿರ್ವಹಣೆ-ಅಗ್ನಿಶಾಮಕ ಪ್ರಾತ್ಯಕ್ಷಿಕೆ, ಸ್ವಚ್ಛತಾ ಹಿ ಸೇವಾ ಮುಂತಾದ ವಿಷಯಗಳ ಕುರಿತು ಮಾಹಿತಿ ಕಾರ್ಯಗಾರ ಜರಗಲಿದೆ.
ಅಪರಾಹ್ನ 4 ಗಂಟೆಯಿಂದ ನಡೆಯುವ ಸಹ ಸಂಬಂಧ ಚಟುವಟಿಕೆಗಳಲ್ಲಿ ಆಶುಭಾಷಣ, ಆಶುನಟನೆ, ಸಮೂಹಗೀತೆ, ಸಕಾಲಿಕ ಚರ್ಚೆ ಕಾರ್ಯಕ್ರಮಗಳು ನಡೆಯಲಿದೆ.  ಸಾರ್ವಜನಿಕ ಕಾರ್ಯಕ್ರಮದಲ್ಲಿ ಆಹಾರ ಮತ್ತು ಆರೋಗ್ಯ, ಮೊಬೈಲ್ ಮತ್ತು ನಾವು, ನೀರಿನ ಸದ್ಬಳಕೆ, ಸಮಾಜ ಮತ್ತು ಸಂಸ್ಕಾರ, ಸಂಬಂಧಗಳ ನಿರ್ವಹಣೆಯಲ್ಲಿ ಹೊಂದಾಣಿಕೆಯ ಮಹತ್ವ ಮುಂತಾದ ವಿಷಯಗಳ ಕುರಿತು ಉಪನ್ಯಾಸ ನಡೆಯಲಿದೆ. ಸಂಜೆ  ಶಿಬಿರಾರ್ಥಿಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದೆ.  ಅ.12 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವಾಣಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮೋಹನ ಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಿ.ಯದುಪತಿ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಎನ್.ಎಸ್.ಎಸ್‌ ಅಧ್ಯಕ್ಷ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.