ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಯನಕ್ಕಾಗಿ NRLM ಪ್ರತಿನಿಧಿಗಳ ಭೇಟಿ

ಲಾಯಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಅಧ್ಯಯನ ನಡೆಸಲು ಆಗಮಿಸಿದ್ದ ಬಿಹಾರದ18, ಮಹಾರಾಷ್ಟದ 3, ತಮಿಳುನಾಡಿನ 2 ಒಟ್ಟು 23 NRLM ಪ್ರತಿನಿಧಿಗಳು ಲಾಯಿಲ ಗ್ರಾಮದ ಪಡ್ಲಾಡಿ ಪ್ರಗತಿಬಂಧು ತಂಡ ಹಾಗೂ ಸಾಧನಾ ಸ್ವಸಹಾಯ ಸಂಘಗಳಿಗೆ  ಸೆ.25 ರಂದು  ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದರು.
ಸಾಧನ ಸ್ವಸಹಾಯ ಸಂಘದ ಸದಸ್ಯರು ವಾರದ ಸಭೆ ನಡೆಸುವ ಕುರಿತು ಪ್ರಾತ್ಯಾಕ್ಷಿಕೆ ಹಾಗೂ ತಮ್ಮ ಸಂಘದ 12 ವರ್ಷಗಳಲ್ಲಿ ಕಂಡುಕೊಂಡ ಅಭಿವೃದ್ಧಿಯ ಕುರಿತು 11 ಮಂದಿ ಸದಸ್ಯರು ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು. ಅದೇ ರೀತಿ ಪಡ್ಲಾಡಿ ಪ್ರಗತಿಬಂಧು ಸಂಘದ 4 ಮಂದಿ ಸದಸ್ಯರು ಸುಮಾರು 25 ವರ್ಷಗಳ ಮೂಲ ಫಲಾನುಭವಿಗಳಾಗಿ ಸಂಘದಿಂದ ಪಡಕೊಂಡ ಪ್ರಯೋಜನಗಳ ಕುರಿತು ಹಾಗೂ ಸಾಧನೆಗಳ ಕುರಿತು ವಿಚಾರ ವಿನಿಮಯಗಳನ್ನು ಮಾಡಿಕೊಳ್ಳಲಾಯಿತು.
ಬರ್ಡ್ ಮಂಗಳೂರು ಸಂಸ್ಥೆಯ ವತಿಂದ ಆಯೋಜಿಸಲಾದ ಈ ಭೇಟಿಯ ಸಂದರ್ಭದಲ್ಲಿ ನಬಾರ್ಡ್ ಸಂಸ್ಥೆ ಮಂಗಳೂರಿನ ಡಿಜಿಎಂಗಳಾದ  ಬಿ.ಬಿ ವಡವಿ, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ನಿರ್ದೇಶಕ  ಕೆ.ಬೂದಪ್ಪ ಗೌಡ, ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದ ಉಪನ್ಯಾಸಕ ಗೋಪಾಲ.ಯು, ಗೆಳತಿ ವಿಭಾಗದ ಆಪ್ತ ಸಮಲೋಚಕಿ  ಶ್ರೀಮತಿ ಚೈತನ್ಯ ಹಾಗೂ ಲಾಯಿಲ ಗ್ರಾಮದ ಸೇವಾಪ್ರತಿನಿಧಿ ಶ್ರೀಮತಿ ಗೀತಾ  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.