ತಾಲೂಕಿನೆಲ್ಲೆಡೆ ಗಾಂಧಿಜಯಂತಿ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ಲಾಯಿಲ ಸೈಂಟ್ ಮೇರೀಸ್ ಶಾಲೆಯಲ್ಲಿ ಗಾಂಧೀಜಿಯವರ 150ನೇ ಜನ್ಮದಿನವನ್ನು ಬಹಳ ಮಹತ್ವಪೂರ್ಣವಾಗಿ ಆಚರಿಸಲಾಯಿತು. ಮೊದಲಿಗೆ ನಮ್ಮ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಜಿನ್ಸಿ ದೇವಸ್ಯ ಈ ದಿನದ ಮಹತ್ವದ ಕುರಿತು ಮಾತಾನಾಡಿದರು. ಸಹಶಿಕ್ಷಕಿ ಶ್ರೀಮತಿ ಮಮತ ಗಾಂಧೀಜಿಯವರ ಜೀವನ ಚರಿತ್ರೆಯ ಕುರಿತು ಸಂಕ್ಷಿಪ್ತವಾಗಿ ಮಾಹಿತಿ ನೀಡುವುದರೊಂದಿಗೆ ಅವರ ಕೆಲವು ಮಹತ್ವದ ಚಿಂತನೆಗಳನ್ನು ಹಾಗೂ ತತ್ವಗಳನ್ನು ನಾವೆಲ್ಲರೂ ಆಳವಡಿಸಿಕೊಳ್ಳುವಂತೆ ಸಂದೇಶ ನೀಡಿದರು. ಮುಖ್ಯಶಿಕ್ಷಕಿಯವರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ಶಾಲಾ ಆವರಣವನ್ನು ಸ್ವಚ್ಛಗೊಳಿಸುವ ಕಾರ್‍ಯದಲ್ಲಿ ಪಾಲ್ಗೊಂಡರು.

ಲಾಯಿಲ ಪ್ರಸನ್ನ ಕಾಲೇಜಿನಲ್ಲಿ ಮಹಾತ್ಮಾಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ಎನ್.ಎಸ್.ಎಸ್ ಘಟಕದ ಉದ್ಘಾಟನೆ ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಪ್ರಾಂಶುಪಾಲ ಫ್ರಾಂಕ್ ಹಿಲರಿ ಡಿಸೋಜ ಅಧ್ಯಕ್ಷತೆಯಲ್ಲಿ  ಜರುಗಿತು.
ಉದ್ಘಾಟನೆಯನ್ನು ಲಾಯಿಲ ಜ್ಯೋತಿ ಆಸ್ಪತ್ರೆಯ ಮೇಲ್ವಿಚಾರಕಿ ಡಾ| ರೇವ್ ಅನೂಜ ಎಂ.ಡಿ ನೆರವೇರಿಸಿದರು.ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ವೀಣಾ ರಾವ್, ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ಸುದ್ದಿ ವಾರಪತ್ರಿಕೆ ವರದಿಗಾರ ಲ| ಅಶ್ರಫ್ ಅಲಿಕುಂಞಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಮೋಹನ್ ಕಾಮತ್ ಉಪಸ್ಥಿತರಿದ್ದರು.
ಎನ್.ಎಸ್.ಎಸ್ ಘಟಕ ನಿರ್ದೇಶಕ ದಿನೇಶ್ ಗೌಡ, ಘಟಕದ ಅಧ್ಯಕ್ಷ ಧನುಷ್, ಸಂಯೋಜಕ ಸುಬ್ರಹ್ಮಣ್ಯ, ಕಾರ್ಯದರ್ಶಿ ಎಸ್.ಎಂ. ನಿಸರ್ಗ, ಶಾಲಾ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕುವೆಟ್ಟ ಗ್ರಾ.ಪಂ. 150ನೇ ವರ್ಷದ ಮಹಾತ್ಮ ಗಾಂಧಿ ಜನ್ಮ ದಿನಾಚರಣೆಯನ್ನು ಕಛೇರಿ ಸಭಾಂಗಣದಲ್ಲಿ ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಅಶೋಕ್ ಕೋಟ್ಯಾನ್ ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಹಾತ್ಮ ಗಾಂಧಿಜಿಯವರ ಆದರ್ಶಗಳ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾ.ಪಂ. ಸದಸ್ಯ ಗೋಪಿನಾಥ ನಾಯಕ್, ಪಂ.ಸದಸ್ಯರಾದ ಶ್ರೀಮತಿ ದಯಾಮಾಧವ, ಶ್ರೀಮತಿ ಅನುಸೂಯ, ಪುರಂದರ ಶೆಟ್ಟಿ, ಪಂ.ಕಾರ್ಯದರ್ಶಿಯಾದ ಶ್ರೀಮತಿ ಸೇವಂತಿ , ಪಂಚಾಯತ್ ಸಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.