ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ

ಉಜಿರೆ: ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ವತಿಯಿಂದ ಮಹಾತ್ಮಾ ಗಾಂಧೀಜಿಯವರ ೧೫೦ನೇ ಜನ್ಮ ದಿನಾಚರಣೆಯನ್ನು ಉಜಿರೆ ಶ್ರೀ ಡಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಆಚರಿಸಲಾಯಿತು.
ಡಾ| ಡಿ ವೀರೇಂದ್ರ ಹೆಗ್ಗಡೆಯವರು ಜನ್ಮ ದಿನಾಚರಣೆಯ ಸಂದೇಶ ಮತ್ತು ಪ್ರತಿಜ್ಞಾವಿಧಿ ಬೋಧನೆ ನೆರವೇರಿಸಿದರು. ಶ್ರೀಮತಿ ಹೇಮಾವತಿ ವಿ ಹೆಗ್ಗಡೆಯವರು ಜನ್ಮ ದಿನಾಚರಣೆಯ ಧ್ಯೇಯವಾಕ್ಯ” ಸ್ವಸ್ಥ ಮನಸ್ಸು, ಸ್ವಚ್ಛ ಪರಿಸರ, ಗಾಂಧಿ ಮಾರ್ಗ” ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲ್ಲಿ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ| ಬಿ.ಯಶೋವರ್ಮ, ಡಿ. ಹರ್ಷೇದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾ ವರ್ಮ, ಶ್ರದ್ಧಾ ಅಮಿತ್. ಪ್ರೊ| ಎಸ್ ಪ್ರಭಾಕರ್, ಪದ್ಮಲತಾ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಧ.ಮಂ.ವಿದ್ಯಾಸಂಸ್ಥೆಗಳ 150 ವಿದ್ಯಾರ್ಥಿಗಳಿಂದ ಮಹಾತ್ಮ ಗಾಂಧೀಜಿಯವg ವೈಷ್ಣವ್ ಜನತೊ ಪ್ರಾರ್ಥನೆ ನೆರವೇರಿತು. ಡಾ| ಬಿ.ಎ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.