ರಿಯಾದ್‌ನಲ್ಲಿ ಜೈಲಿನಲ್ಲಿದ್ದ ವ್ಯಕ್ತಿಗೆ ಕೆಸಿಎಫ್ ನೆರವಿನಿಂದ ಬಿಡುಗಡೆ ಭಾಗ್ಯ

ಬೆಳ್ತಂಗಡಿ: ಕಳೆದ 8 ವರ್ಷಗಳಿಂದ ಸೌದಿ ಅರೇಬಿಯಾದ ದಮ್ಮಾಂ ಹಾಗೂ ರಿಯಾದ್ ಪ್ರಾಂತ್ಯಗಳಲ್ಲಿ ರೀಟೇಲ್ ಸರಣಿಯ ಸಂಸ್ಥೆಯೊಂದರ ಶಾಪ್ ಗಳಲ್ಲಿ ದುಡಿಯುತ್ತಿದ್ದ ಮಂಗಳೂರು ಮೂಲದ ಇಮ್ರಾನ್ ಎಂಬ ಯುವಕನ ವಿರುದ್ಧ ಸಂಸ್ಥೆಯ ಮ್ಹಾಲಕರು ಹಣ ವಂಚನೆಯ ಆರೋಪ ಹೊರಿಸಿ ಮೊಕದ್ದಮೆ ದಾಖಲಿಸಿದ್ದು, ಆ ಮೂಲಕ ಅವರನ್ನು ಬಂಧನದಲ್ಲಿಟ್ಟಿದ್ದು, ಅವರ ಬಿಡುಗಡೆಗಾಗಿ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ಸಂಘಟನೆ ಪ್ರಯತ್ನಪಟ್ಟು ಯಶಸ್ಸು ಕಂಡಿದೆ.
ಯುವಕನ ಬಿಡುಗಡೆಗಾಗಿ ಶ್ರಮಿಸಿದ ತಂಡದಲ್ಲಿ ತಾಲೂಕಿನವರಾದ ಸಲೀಂ ಕನ್ಯಾಡಿ, ನಝೀರ್ ಕಾಷಿಪಟ್ಣ, ಇಸ್ಮಾಯಿಲ್ ಜೋಗಿಬೆಟ್ಟು, ಇತರರಾದ ಯಾಕೂಬ್ ಸಖಾಫಿ ಗಸೀಂ, ಸಾಲಿ ಬೆಳ್ಳಾರೆ, ಮಜೀದ್ ವಿಟ್ಲ ಹಾಗೂ ಹಕೀಂ ಪಾತೂರು ಶ್ರಮಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.