ಅ. 12-13: ಉಜಿರೆಯಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ- ಪ್ರೌಢ ಶಾಲಾ ಕ್ರೀಡಾಕೂಟ

ಉಜಿರೆ: ದ. ಕ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಬಾಲಕ ಬಾಲಿಕೆಯರ ಕ್ರೀಡಾಕೂಟವು ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಸೆ. 12- 13 ರಂದು ನಡೆಯಲಿದೆ. ಈ ಕೀಡಾಕೂಟದಲ್ಲಿ ಮೊದಲ ದಿನ 1500 ಕ್ರೀಡಾ ಪಟುಗಳು ಭಾಗಿಯಾದರೆ 2 ನೇ ಡಿನ 1 ಸಾವಿರ ಕ್ರೀಡಾಪಟುಗಳು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್ ಗುರುಪ್ರಸಾದ್ ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಎಲ್ಲಾ ಸಿದ್ಧತೆಗಳನ್ನು ನಮ್ಮ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ನೀಡಲಾಗುವುದು. ಎರಡೂ ದಿನಗಳಲ್ಲಿ ಆಗಮಿಸುವ ಕ್ರೀಡಾಪಟುಗಳಿಗೆ, ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗುವುದು. ಪ್ರಸ್ತುತ ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್‌ಗಳಲ್ಲಿ ಪ್ರಶಸ್ತಿಗಳನ್ನು ಗೆಲ್ಲುವ ಮಟ್ಟಕ್ಕೆ ಬಂದಿರುವುದು ನಮಗೆ ಹೆಮ್ಮೆ. ಅದೇ ರೀತಿ ಎಳವೆಯಲ್ಲೇ ಅಂತಹಾ ಪ್ರೋತ್ಸಾಹ ದೊರೆತರೆ ಇನ್ನಷ್ಟು ಕ್ರೀಡಾ ಪ್ರತಿಭೆಗಳ ಹುಡುಕಾಟ ಸಾಧ್ಯವಿದೆ ಎಂದರು.
ಕ್ರೀಡಾಕೂಟ ಆಯೋಜನೆಯ ದೃಷ್ಟಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ವಿಷಯ ತಜ್ಞರುಗಳು ಅದನ್ನು ನಿರ್ವಹಿಸುತ್ತಾ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದರು. 74 ಬಗೆಯ ಸ್ಪರ್ಧೆಗಳಿದ್ದು,150 ಮಂದಿ ತಂಡ ವ್ಯವಸ್ಥಾಪಕರು, 150 ಮಂದಿ ಪರಿಣತ ತೀರ್ಪುಗಾರರು ಕ್ರೀಡಾಕೂಟ ನಡೆಸಿಕೊಡಲಿದ್ದಾರೆ. ಹಿಂದಿನ ದಾಖಲೆಗಳು ಅಳಿದು ಹೊಸ ದಾಖಲೆಗಳು ನಿರ್ಮಾಣವಾಗುವ ಸಂದರ್ಭ ಕೂಡ ಇದು ಆಗಲಿದೆ ಎಂದರು. ಈ ಬಾರಿಯ ರಾಜ್ಯಮಟ್ಟದ ಪಂದ್ಯಾಟ ಅಕ್ಟೋಬರ್ ತಿಂಗಳಲ್ಲಿ ಮಂಡ್ಯದಲ್ಲಿ ಜರುಗಲಿದೆ ಎಂದರು.
ಗೋಷ್ಟಿಯಲ್ಲಿ ಯಶೋಧರ ಸುವರ್ಣ, ಸೋಮಶೇಖರ ಶೆಟ್ಟಿ, ಯುವರಾಜ ಅನಾರು, ಅಜಿತ್ ಕುಮಾರ್ ಕೊಕ್ರಾಡಿ, ಗುಣಪಾಲ ಎಂ.ಎಸ್, ಕೃಷ್ಣಾನಂದ ರಾವ್ ಮುಂಡಾಜೆ, ಶೀನಪ್ಪ ಗೌಡ, ರಮೇಶ್ ಎಚ್, ಜೋಸೆಫ್, ಶೇಖರ ಕಡ್ತಳೆ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.