ಧರ್ಮಸ್ಥಳ ಕಲಾ ಬಳಗದವರಿಂದ ಹೇಮಾವತಿ ವಿ ಹೆಗ್ಗಡೆಯವರಿಗೆ ಗೌರವ ಸಮರ್ಪಣೆ

ಉಜಿರೆ: ಕಳೆದ ನಾಲ್ಕು ವರ್ಷಗಳಿಂದ ಧರ್ಮಸ್ಥದಲ್ಲಿ ದೇವಳ ನೌಕರ ವೃಂದದವರು ನಾಟಕ ಪ್ರದರ್ಶನ ನೀಡಲು ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ನೀಡಿದ ಹೇಮಾವತಿ ವಿ. ಹೆಗ್ಗಡೆಯರವನ್ನು ಹವ್ಯಾಸಿ ನಾಟಕ ಕಲಾವಿದರು  ಗೌರವಿಸಿ ಕೃತಜ್ಞತೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಬಿ. ಭುಜಬಲಿ, ಬಿ. ಸೀತಾರಾಮ ತೋಳ್ಪಾಡಿತ್ತಾಯ, ರಾಜೇಂದ್ರ ದಾಸ್ ಡಿ., ರತ್ನವರ್ಮ ಜೈನ್, ಬದ್ರಿನಾಥ್, ಸಂದೇಶ್, ಸಾಧನಾ, ಭವಾನಿ ಭಟ್, ಸುನಿಲ್ ಕಲ್ಕೊಪ್ಪ, ಭಗೀರಥ, ಶಂಭು ಭಟ್ ಮೊದಲಾದ ಕಲಾವಿದರು ಉಪಸ್ಥಿತರಿದ್ದರು.
ಕಲಾ ತಂಡದವರು ಇತ್ತೀಚೆಗೆ “ನೆಮ್ಮದಿ ಅಪಾರ್ಟ್‌ಮೆಂಟ್” ಎಂಬ ನಾಟಕ ಪ್ರದರ್ಶನ ನೀಡಿದ್ದು ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ ಹೆಗ್ಗಡೆಯವರು ಮತ್ತು ಕುಟುಂದವರು ಮೆಚ್ಚುಗೆ ವ್ಯಕ್ತಪಡಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.