HomePage_Banner_
HomePage_Banner_

ವಿಮುಕ್ತಿ : ಚೈಲ್ಡ್ ಫಂಡ್ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ

ಕಪುಚಿನ್ ಕೃಷಿಕ ಸೇವಾಕೇಂದ್ರ ವಿಮುಕ್ತಿ ಲಾಯಿಲ, ಚೈಲ್ಡ್ ಫಂಡ್ ಇಂಡಿಯಾ ಇದರ ಸಹಯೋಗದೊಂದಿಗೆ ಚೈಲ್ಡ್ ಫಂಡ್ ನ ನೋಂದಾಯಿತ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಣೆ ಕಾರ್‍ಯಕ್ರಮ ಇತ್ತೀಚೆಗೆ ನಡೆಯಿತು.
ಈ ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಯೋಜನಾ ಪ್ರಬಂದಕ  ಫ್ರಾನ್ಸೀಸ್ ದಾಂತಿ ಇವರು ವಿದ್ಯಾರ್ಥಿ ವೇತನ ನೀಡುವ ಉದ್ದೇಶ ಹಾಗೂ ಕಲಿಕೆಯಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಏರಿ ನಿಮ್ಮ ಹೆತ್ತವರಿಗೂ ಹಾಗೂ ಸಂಸ್ಥೆಗೆ ಒಳ್ಳೆಯ ಹೆಸರನ್ನು ತಂದುಕೊಡುತ್ತಾ, ನಿಮ್ಮ ಜೀವನದ ಭವಿಷ್ಯವನ್ನು ರೂಪಿಸಿಕೊಂಡು ವಿದ್ಯಾವಂತರಾಗಿ ಎಂದು ಹಾರೈಸಿದರು.  ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ಹಾಗೂ ಪೂರಕವಾಗಿ ನಡೆಸಲ್ಪಟ್ಟ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಮಕ್ಕಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ಕಾರ್‍ಯಕ್ರಮದಲ್ಲಿ ಚ್ಯೆಲ್ಡ್ ಫಂಡ್ ಯೋಜನೆಯ ಜೀವಾನಾಧಾರ ಸಂಯೋಜಕ ಸಿದ್ದಾಂತ್ ಪಿ, ಉಪಸ್ಥಿತರಿದ್ದರು.  ಅಶೋಕ ಸ್ವಾಗತಿಸಿ, ಶ್ರೀಮತಿ ಸವಿತಾ  ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.