ಕಂಪ್ಯೂಟರ್‌ನಲ್ಲೇ ಪರೀಕ್ಷೆ ಬರೆದ ಉಜಿರೆ ಎಸ್.ಡಿ.ಎಂ ವಿದ್ಯಾರ್ಥಿಗಳು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ ಎಸ್.ಡಿ.ಎಂ ಕಾಲೇಜು ಇತ್ತೀಚೆಗೆ ನಡೆದ ಪದವಿ ಮಟ್ಟದ ಮೊದಲ ಆಂತರಿಕ ಪರೀಕ್ಷೆಯಲ್ಲಿ ಅಂತಿಮ ಬಿ. ಎ-ಯ ಪತ್ರಿಕೋದ್ಯಮ ಹಾಗೂ ಇಂಗ್ಲಿಷ್ ಐಚ್ಛಿಕ ವಿದ್ಯಾರ್ಥಿಗಳು ನಾಲ್ಕು ವಿಷಯಗಳ ಪರೀಕ್ಷೆಯನ್ನು ಸಾಂಪ್ರದಾಯಿಕ ಪೆನ್ನು-ಪೇಪರ್ ವಿಧಾನದ ಬದಲು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ ಬರೆಯುವ ಮೂಲಕ ವಿಶಿಷ್ಟ ರೀತಿಯಲ್ಲಿ ಪರೀಕ್ಷೆ ಬರೆದ ಅನುಭವ ಪಡೆದರು.
ಹತ್ತು ವರ್ಷದ ಹಿಂದೆ ಎಸ್.ಡಿ.ಎಂ ಕಾಲೇಜಿನ ಅಂದಿನ ಪ್ರಾಂಶುಪಾಲರಾಗಿದ್ದ ಡಾ. ಬಿ. ಯಶೋವರ್ಮ ಅವರು ಬಹುಆಯ್ಕೆಯ ಆನ್‌ಲೈನ್ ಪರೀಕ್ಷೆ ಪದ್ಧತಿ ಅಳವಡಿಸಿ ಪರೀಕ್ಷೆಗಳಿಗೆ ತಂತ್ರಜ್ಞಾನದ ಸ್ಪರ್ಶ ನೀಡಿದ್ದರು
ಈ ಕಾಗದ ರಹಿತ ಪರೀಕ್ಷಾ ವಿಧಾನವನ್ನು ಮುಂದೆ ಎಲ್ಲಾ ಪದವಿ ವಿಷಯಗಳಿಗೆ ವಿಸ್ತರಿಸುವ ಯೋಚನೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ. ಎನ್. ಕೇಶವ್ ತಿಳಿಸಿದ್ದಾರೆ.
ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಕಲಿಕೆಯಲ್ಲಿ ತಂತ್ರಜ್ಞಾನದ ಬಳಕೆಯನ್ನು ಪ್ರೋತ್ಸಾಹಿಸುವ ಅನೇಕ ಯೋಜನೆಗಳನ್ನು ಈಗಾಗಲೇ ಅಳವಡಿಸಲಾಗಿದೆ. ತರಗತಿಯ ಪಾಠಗಳನ್ನು ಹೊರತುಪಡಿಸಿ, ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಇ-ಲೆಕ್ಚರ್‌ಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ. ಸುಮಾರು 250ಕ್ಕೂ ಅಧಿಕ ವಿಷಯಗಳ ಉಪನ್ಯಾಸಗಳನ್ನು ಈಗಾಗಲೇ ಯೂಟ್ಯೂಬ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.