ಬೆಳ್ತಂಗಡಿ ಲ್ಯಾಂಪ್ಸ್ ಸೊಸೈಟಿ ಮಹಾಸಭೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ (ಲ್ಯಾಂಪ್ಸ್) ಬೆಳ್ತಂಗಡಿ ಇದರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಐ.ಎನ್. ವೆಂಕಪ್ಪ ನಾಯ್ಕರ ಅಧ್ಯಕ್ಷತೆಯಲ್ಲಿ ಸೆ.21 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು.
ಸಂಘದ ಕಾರ್ಯದರ್ಶಿ ನೀನಾ ಕುಮಾರ್ 2017-18ನೇ ಸಾಲಿನ ವರದಿ ಮಂಡಿಸಿ, ಸಂಘದಲ್ಲಿ ಎ ತರಗತಿಯ 2148ಸಿ ತರಗತಿಯ 890 ಮತ್ತು ಡಿ ತರಗತಿಯ 10 ಮಂದಿ ಸದಸ್ಯರಿದ್ದಾರೆ. ಸಂಘದಲ್ಲಿ ಒಟ್ಟು ರೂ.1,84,20,535 ಠೇವಣಿಯಿದ್ದು, 2018-19ನೇ ಸಾಲಿಗೆ ರೂ. 200 ಲಕ್ಷ ಠೇವಣಿ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಐ.ಎನ್ ವೆಂಕಪ್ಪ ನಾಯ್ಕ ಅವರು ಮಾತನಾಡಿ ಸಂಘದಿಂದ 2017-18ನೇ ಸಾಲಿನಲ್ಲಿ ರೂ.5593079ಸಾಲವನ್ನು ನೀಡಲಾಗಿದ್ದು, 2018-19 ನೇ ಸಾಲಿಗೆ 348 ಜನರಿಗೆ ರೂ. 61.52 ಲಕ್ಷ ಸಾಲ ನೀಡುವ ಗುರಿಯನ್ನು ನಿಗದಿಪಡಿಸಲಾಗಿದೆ. 2018-19ನೇ ಸಾಲಿಗೆ ಬೆಳ್ತಂಗಡಿ ಕೇಂದ್ರ ಕಚೇರಿಗೆ ರೂ.65 ಲಕ್ಷದಲ್ಲಿ ವ್ಯಾಪಾರ ಮಳಿಗೆ, ಗೋದಾಮು ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. 2017-18 ನೇ ಸಾಲಿನಲ್ಲಿ ಸಂಘವು ರೂ.51546 ನಿವ್ವಳ ಲಾಭದಲ್ಲಿದೆ ಎಂದು ತಿಳಿಸಿ, ಸಂಘದ ಅಭಿವೃದ್ಧಿಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಮತ್ತು ಪಿ.ಯು.ಸಿ, ವೃತ್ತಿ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರುವ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ವಸಂತ ನಾಯ್ಕ, ದಿನೇಶ ನಾಯ್ಕ, ಚೆನ್ನಪ್ಪ ಎಂ.ಕೆ, ಸಾಂತಪ್ಪ, ಶ್ರೀಮತಿ ಲಲಿತ, ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಲದ ಪ್ರತಿನಿಧಿ ಮಂಜುನಾಥ ಎನ್.ಎಸ್ ಉಪ್ಪಳಿಗೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಲಿಂಗಪ್ಪ ನಾಯ್ಕ ಸ್ವಾಗತಿಸಿದರು. ನಿರ್ದೇಶಕ ಚೆನ್ನಕೇಶವ ಅರಸಮಜಲು ಧನ್ಯವಾದವಿತ್ತರು. ಸಿಬಂದಿಗಳಾದ ಖಜಾಂಚಿ/ಗುಮಾಸ್ತೆ ಶ್ರೀಮತಿ ರಾಧ ಕೆ, ಶಿಶಿಲ ಶಾಖಾ ವ್ಯವಸ್ಥಾಪಕಿ ಜಯಂತಿ, ಉಜಿರೆ ಶಾಖಾ ವ್ಯವಸ್ಥಾಪಕ ಚಿದಾನಂದ, ಮುಂಡಾಜೆ ಶಾಖಾ ವ್ಯವಸ್ಥಾಪಕಿ ಶ್ರೀಮತಿ ಸರೋಜಿನಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.