ತಾಲೂಕಿನ 500 ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಣೆ

ಬೆಳ್ತಂಗಡಿ: ತಾಲೂಕಿನ 500 ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮವು ಇಂದು (ಸೆ.28) ಬೆಳ್ತಂಗಡಿಯಲ್ಲಿರುವ ‘ಶ್ರಮಿಕ’ ಶಾಸಕರ ಕಛೇರಿಯಲ್ಲಿ ಜರುಗಿತು.

ಶಾಸಕ ಹರೀಶ್ ಪೂಂಜ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿ, 94ಸಿ, 94ಸಿಸಿ ಹಕ್ಕುಪತ್ರಕ್ಕೆ ಅರ್ಜಿ ಕೊಟ್ಟವರ ವಿಲೇ ಮಾಡುವ ಸೂಚನೆ ಕೊಟ್ಟ ಪ್ರಕಾರ, 500 ಜನರಿಗೆ ಕೊಡುವ ವ್ಯವಸ್ಥೆಯಾಗಿದೆ. ಪ್ರತೀ ಸೋಮವಾರ ಹಕ್ಕುಪತ್ರ ಕೊಡುವ ಕೆಲಸ ಮಾಡುತ್ತೇನೆ. ಬಡವರಿಗೆ ಸರಕಾರದ ಯೋಜನೆಗಳನ್ನು ಮುಟ್ಟಿಸುವ ಕೆಲಸ ಮಾಡುತ್ತೇನೆ. ವಸತಿಯೋಜನೆಯನ್ನು ಸಮರ್ಪಕವಾಗಿ ವಿತರಿಸುವ ಕಾರ್ಯವನ್ನು ಮಾಡುತ್ತೇನೆ ಎಂದರು. ಕಾರ್ಯಕ್ರಮದಲ್ಲಿ ತಾ.ಪಂ ಉಪಾಧ್ಯಕ್ಷೆ ವೇದಾವತಿ, ತಾ.ಪಂ ಸದಸ್ಯ ಸುಧೀರ್ ಸುವರ್ಣ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.