ಡ್ಯಾಡ್ ಸ್ಕಾಲರ್‌ಶಿಪ್‌ಗೆ ಕಾನರ್ಪದ ವಿದ್ಯಾಶ್ರೀ ವಿಜಯ್ ಹೊಳ್ಳ ಆಯ್ಕೆ

ಕಡಿರುದ್ಯಾವರ : ಜರ್ಮನಿ ಸರಕಾರ ಪ್ರಾಯೋಜಿತ ಡ್ಯಾಡ್ ಸಂಸ್ಥೆಯು ಉನ್ನತ ವ್ಯಾಸಾಂಗಕ್ಕೆ ನೀಡುವ ವಿದ್ಯಾರ್ಥಿ ವೇತನಕ್ಕೆ ಕಾನರ್ಪ ನಿವಾಸಿ ವಿದ್ಯಾಶ್ರೀ ವಿಜಯ್ ಹೊಳ್ಳ ಅರ್ಹತೆಯ ಆಧಾರದಲ್ಲಿ ಆಯ್ಕೆಯಾಗಿದ್ದಾರೆ. ಮೂಲತಃ ಬೆಂಗಳೂರಿನವರಾದ ಅವರು ಕಾನರ್ಪ ನಿವಾಸಿ, ಮುಂಡಾಜೆ ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ದೇವಸ್ಯ ಇಲ್ಲಿನ ಪ್ರಧಾನ ಅರ್ಚಕ ಸತ್ಯನಾರಾಯಣ ಹೊಳ್ಳ ಮತ್ತು ಶಶಿಕಲಾ ಎಸ್. ಹೊಳ್ಳ ದಂಪತಿ ಪುತ್ರ ವಿಜಯ್ ಹೊಳ್ಳ ಅವರ ಪತ್ನಿ.ಈಗಾಗಲೇ ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಬಯೋಟೆಕ್ ಇಂಜಿನಿಯರಿಂಗ್ ಪದವಿ ಪಡೆದಿರುವ ವಿದ್ಯಾಶ್ರೀ, ಕಂಪನಿಯೊಂದರಲ್ಲಿ ಕಿರಿಯ ಕೃಷಿ ವಿಜ್ಞಾನಿಯಾಗಿದ್ದಾರೆ.

ಪ್ರಸ್ತುತ ಅವರು ಡ್ಯಾಡ್ ಸ್ಕಾಲರ್‌ಶಿಪ್‌ಗೆ ಅರ್ಹರಾಗಿದ್ದು ಆ ಮೂಲಕ ಅವರು ಜರ್ಮನಿಯ ಬೊನ್ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನದಲ್ಲಿ ಅಗ್ರಿಕಲ್ಚರಲ್ ಸೈನ್ಸಸ್ ಆಂಡ್ ರಿಸೋರ್ಸ್ ಮ್ಯಾನೆಜ್‌ಮೆಂಟ್ ಇನ್ ದಿ ಟ್ರೊಪಿಕ್ಸ್ ಆಂಡ್ ಸಬ್‌ಟ್ರೊಪಿಕ್ಸ್,(ಆರ್ಟ್ಸ್) ಎಂಬ ವಿಷಯದ ಕುರಿತು ಸ್ನಾತ್ತಕೋತ್ತರ ಉನ್ನತ ಪದವಿಗಾಗಿ ವ್ಯಾಸಂಗ ಮುಂದುವರಿಸಬಹುದಾಗಿದೆ.ಡ್ಯಾಡ್ ಸ್ಕಾಲರ್‌ಶಿಪ್‌ನಲ್ಲಿ ಅಕ್ಟೋಬರ್ ಅವರು ಜರ್ಮನಿಗೆ ತೆರಳಲಿದ್ದು, ಕೋರ್ಸ್ ಶುಲ್ಕ, ವಸತಿ, ಪ್ರಯಾಣ ಭತ್ಯೆಯನ್ನು ಪಡೆಯಲಿದ್ದಾರೆ.ಈ ವ್ಯಾಸಂಗದ ಸಂದರ್ಭ ಕ್ಷೇತ್ರ ಅಧ್ಯಯನದ ಭಾಗವಾಗಿ ವಿವಿಧ ದೇಶಗಳಿಗೆ ಪ್ರಯಾಣ ಮಾಡುವ ಅವಕಾಶವೂ ಇರಲಿದೆ. ಕೃಷಿ ಭೂಮಿ ನಿರ್ವಹಣೆಗೆ ಸ್ಥಳೀಯವಾದ ಭೌಗೋಳಿಕ ವಾತಾವರಣಕ್ಕೆ ಯಾವ ಕಾಲಕ್ಕೆ ಯಾವ ಕೃಷಿ ಬೆಯಬಹುದು ಮತ್ತು ಕೃಷಿ ರೋಗ ನಿಯಂತ್ರಣ ನಡೆಸುವ ಬಗೆ ಹೇಗೆ ಎಂಬ ಬಗ್ಗೆ ವಿಶೇಷ ಅಧ್ಯಯನ ಕೈಗೊಳ್ಳಲಿರುವ ಅವರು ಈಗಾಗಲೇ ವಿದೇಶಗಳಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದಾರೆ. ಮುಂದಿನ ತಿಂಗಳು ಅವರು ಇಟೆಲಿಗೂ ತೆರಳಲಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.