ಮನಸ್ಸಿನ ಮೇಲೆ ಜಯ ಸಾಧಿಸುವುದೇ ಶಿಬಿರದ ಉದ್ದೇಶ : ಡಾ. ಹೆಗ್ಗಡೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಉಜಿರೆ : ಮದ್ಯಪಾನ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದ್ದು, ಬಹಳಷ್ಟು ಇತರ ವ್ಯಸನಗಳಿಗೆ ಪ್ರೇರಣೆ ನೀಡಬಲ್ಲ ಕೆಟ್ಟ ಚಾಳಿಯಾಗಿರುತ್ತದೆ. ಮನುಷ್ಯನ ಶಕ್ತಿ, ಧ್ಯೆರ್ಯ ಮತ್ತು ಸ್ವಾಮಿತ್ವವನ್ನು ನಾಶ ಮಾಡಿ ರೋಗಗ್ರಸ್ಥರನ್ನಾಗಿ ಮಾಡುವುದೇ ಇದರ ಪ್ರಮುಖ ಗುಣ. ಕುಡುಕ ತಂದೆಯನ್ನು ಮಗ ಇಷ್ಟ ಪಡಲ್ಲ. ವ್ಯಸನವುಳ್ಳ ಮೇಸ್ಟ್ರು ವಿದ್ಯಾರ್ಥಿಗಳಿಗೆ ಇಷ್ಟವಿಲ್ಲ. ಕೆಟ್ಟ ಅಭ್ಯಾಸಗಳಿಂದ ಕೌರವರು ನಾಶವಾದರು. ಒಳ್ಳೆಯ ಗುಣಗಳಿಂದ ಪಾಂಡವರು ಯಶಸ್ವಿಯಾದರು. ಈ ಎಲ್ಲಾ ಗುಣಗಳು ಮನಸ್ಸಿನ ಮೇಲೆ ಹತೋಟಿ ಸಾಧಿಸುವುದರಿಂದ ಬರುತ್ತದೆ. ಈ ಮನಸ್ಸಿನ ಮೇಲೆ ಜಯ ಸಾಧಿಸಲು ಪ್ರೇರಣೆ ನೀಡುವುದೇ ಶಿಬಿರದ ಉದ್ದೇಶವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಅವರು ಉಜಿರೆಯ ಲಾಲದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತಿರುವ ೧೨೨ನೇ ವಿಶೇಷ ಮದ್ಯವರ್ಜನ ಶಿಬಿರದ ೬೫ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಉಜಿರೆಯ ವ್ಯಸನಮುಕ್ತಿ ಕೇಂದ್ರದಲ್ಲಿ ವಾರ್ಷಿಕವಾಗಿ 25 ಶಿಬಿರಗಳನ್ನು ನಡೆಸಿ 1500 ಶಿಬಿರಾರ್ಥಿಗಳನ್ನು ಮನಪರಿವರ್ತನೆ ಮಾಡುವ ಕೆಲಸ ಸಮರ್ಪಕವಾಗಿ ನಡೆಸಲಾಗುತ್ತಿದೆ. ಈ ಶಿಬಿರಗಳಿಗೆ ಡಾ| ಹೆಗ್ಗಡೆಯವರು ಭೇಟಿ ನೀಡಿ ಮಾಹಿತಿ ನೀಡುತ್ತಿರುವುದು ವಿಶೇಷವಾಗಿದೆ ಎಂದು ರಾಜ್ಯ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿ. ಪಾಸ್ ತಿಳಿಸಿರುತ್ತಾರೆ. ಈ ಶಿಬಿರದಲ್ಲಿ ಓರ್ವ ವೈದ್ಯರು, 2 ವಕೀಲರು, 3 ಶಿಕ್ಷಕರು, 2 ಅಭಿಯಂತರರು, 7 ಸರಕಾರಿ ನೌಕರರು, 20 ಸ್ವ ಉದ್ಯೋಗಿಗಳು, 25 ಕೃಷಿಕರು ಮತ್ತಿತರ ಮಂದಿ ಭಾಗವಹಿಸಿರುತ್ತಾರೆ. ಈ ಸಂದರ್ಭದಲ್ಲಿ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್, ಶಿಬಿರಾಧಿಕಾರಿ ನಾಗೇಶ್ ವೈ, ಮಾಧವ, ನಾಗರಾಜ್, ಆರೋಗ್ಯ ಸಹಾಯಕಿ ಫಿಲೋಮಿನಾ, ಸಲಹೆಗಾರರಾದ ಚೈತನ್ಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.