ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿ ಮಹಾಸಭೆ

ಬೆಳ್ತಂಗಡಿ: ಬೆಳ್ತಂಗಡಿ ಹಾಗೂ ಉಜಿರೆಯಲ್ಲಿ ಶಾಖೆಯನ್ನು ಹೊಂದಿರುವ ಕಾರ್ಕಳ ಶ್ರೀ ಬಾಹುಬಲಿ ಕ್ರೆಡಿಟ್ ಸೌಹಾರ್ದ ಸಹಕಾರಿಯ 2017-18ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಹೊಟೇಲ್ ಪ್ರಕಾಶ್‌ನ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷರಾದ ನೇಮಿರಾಜ ಅರಿಗರವರು ಮಾತನಾಡುತ್ತಾ ಸಹಕಾರಿಯು 2105650 ರೂ. ಪಾಲು ಬಂಡವಾಳ ಹೊಂದಿದ್ದು ಆರ್ಥಿಕ ವರ್ಷದಲ್ಲಿ ಬಂದ ಲಾಭದಲ್ಲಿ ಉಪವಿಧಿಯನ್ವಯ ವಿಂಗಡಣೆ ಮಾಡಿ ಸದಸ್ಯರಿಗೆ ಶೇ.12 ಲಾಭಾಂಶ ಘೋಷಣೆ ಮಾಡಿದರು. ಸಹಕಾರಿಯ ಬೆಳ್ತಂಗಡಿ ಹಾಗೂ ಉಜಿರೆ ಶಾಖೆಯಲ್ಲಿ ಇ-ಸ್ಟಾಪಿಂಗ್ ಸೌಲಭ್ಯವಿದ್ದು ಉತ್ತಮ ವ್ಯವಹಾರ ಹೊಂದಿದೆ. ಕೇಂದ್ರ ಕಚೇರಿ ಕಾರ್ಕಳದಲ್ಲಿ ಹಾಗೂ ಶಾಖೆಗಳಾದ ಬೆಳ್ತಂಗಡಿ ಹಾಗೂ ಉಜಿರೆಯಲ್ಲಿ ಜಾಗದ ಆರ್‌ಟಿಸಿ (ಪಹಣಿ ಪತ್ರ) ವಿತರಣೆಗೆ ಈ ದಿನ ಚಾಲನೆ ನೀಡಲಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾದ ಮಹಾವೀರ ಜೈನ್‌ರವರಿಗೆ ಪ್ರಥಮ ಪಹಣಿ ಪತ್ರವನ್ನು ವಿತರಿಸಲಾಯಿತು.
ಗತವರ್ಷದ ಅಯವ್ಯಯಗಳನ್ನು ಮಂಜೂರು ಮಾಡಲಾಯಿತು. ಹಾಗೂ ಮುಂದಿನ ಸಾಲಿನ ಬಜೆಟನ್ನು ಅನುಮೋದಿಸಲಾಯಿತು. ನಿರ್ದೇಶಕರಾದ ಪ್ರವೀಣ್ ಭಟ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಿರ್ದೇಶಕ ಎಸ್. ಪಾರ್ಶ್ವನಾಥ ವರ್ಮ ಸ್ವಾಗತಿಸಿ, ವಿಶುಕುಮಾರ್ ಜೈನ್ ಕಾರ್‍ಯಕ್ರಮ ನಿರೂಪಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.