ಅ.1ರಂದು ಕೆ. ಅಶೋಕ್ ಕುಮಾರ್‌ಗೆ ಅಭಿನಂದನಾ ಸಮಾರಂಭ

ಕೊಯ್ಯೂರು: ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕಳೆದ 43 ವರ್ಷಗಳಿಂದ ಸುದೀರ್ಘ ವರ್ಷ ಕಾರ್ಯದರ್ಶಿಯಾಗಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಮೇ 31 ರಂದು ವಯೋ ನಿವೃತ್ತರಾದ ಕೆ. ಅಶೋಕ್ ಕುಮಾರ್‌ರವರಿಗೆ ಅಭಿನಂದನಾ ಸಮಾರಂಭ ಅ.1 ರಂದು ಸಂಘದ ವತಿಯಿಂದ ಆದೂರು ಪೆರಾಲ್‌ನ ಶ್ರೀ ಪಂಚದುರ್ಗಾ ಸಹಕಾರಿ ಭವನದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರ ಕಟೀಲಿನ ಅನುವಂಶೀಯ ಅರ್ಚಕರಾದ ವೇ ಮೂ| ಕಮಲಾದೇವಿ ಅಸ್ರರಣ್ಣರು ಆಶೀರ್ವಚನ ನೀಡಲಿದ್ದಾರೆ. ಸಮಾರಂಭವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಮ್.ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಶ್ರೀಕೃಷ್ಣ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಪುಂಜಾಲಕಟ್ಟೆ ಸ.ಪ.ದರ್ಜೆ ಕಾಲೇಜು ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ವ ಅಭಿನಂದನಾ ಭಾಷಣ ನೀಡಲಿದ್ದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಸನ್ಮಾನಿಸಲಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳ ತೋಟಗಾರಿಕಾ ವಿಭಾಗದ ಮುಖ್ಯಸ್ಥ ಬಿ.ಬಾಲಕೃಷ್ಣ ಪೂಜಾರಿ ಬಜೆ ಸನ್ಮಾನ ಪತ್ರ ವಾಚಿಸಲಿದ್ದಾರೆ. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಸಹಕಾರಿ ಯೂನಿಯಾನ್ ಅಧ್ಯಕ್ಷ ಹರೀಶ್ ಆಚಾರ್ಯ, ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಬಿ.ನಿರಂಜನ್ ಭಾವಂತಬೆಟ್ಟು, ಸಹಕಾರಿ ಸಂಘಗಳ ಉಪನಿಬಂಧಕ ಬಿ.ಕೆ.ಸಲೀಂ, ಸಹಾಯಕ ನಿಬಂಧಕ ಮಂಜುನಾಥ್, ಕುವೆಟ್ಟು ಕ್ಷೇತ್ರದ ಜಿ.ಪ.ಸ. ಮಮತಾ ಎಂ.ಶೆಟ್ಟಿ, ಕೊಯ್ಯೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ, ಕಳಿಯ ಕ್ಷೇತ್ರದ ತಾ.ಪ.ಸದಸ್ಯ ಪ್ರವೀಣ್ ಕುಮಾರ್, ಸಹಕಾರಿ ಸಂಘಗಳ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುಕನ್ಯಾ, ಬೆಳ್ತಂಗಡಿ ಶಾಖಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಶ್ರೀನಿವಾಸ್ ಎಂ, ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕ ಸಂದೇಶ್ ಕುಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.