ನವಚೇತನ ತೋಟಗಾರಿಕಾ ಕಂಪನಿ ವಾರ್ಷಿಕ ಸಭೆ

Advt_NewsUnder_1
Advt_NewsUnder_1
Advt_NewsUnder_1

ಕಲ್ಲೇರಿ : ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ನಿಯಮಿತ ಇದರ ತೃತೀಯ ವಾರ್ಷಿಕ ಸಾಮಾನ್ಯ ಸಭೆಯು ಕಂಪನಿಯ ಅಧ್ಯಕ್ಷ ಪಿ. ದುಗ್ಗಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ಕಲ್ಲೇರಿಯ ಅಂಬೇಡ್ಕರ್ ಭವನದಲ್ಲಿ ಸೆ. 18ರಂದು ನಡೆಯಿತು.
ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಿಶೋರ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿ, ಕಂಪನಿಯ ಕಾರ್ಯಸೂಚಿ ಆಯವ್ಯಯ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು. ಕಂಪನಿಯ ಅಧ್ಯಕ್ಷ ಪಿ. ದುಗ್ಗಪ್ಪ ಗೌಡ ಇವರು ಕಂಪನಿಯ ಹಾಗುಹೋಗುಗಳ ವಿವರಣೆಯನ್ನು ಸಭೆಯ ಮುಂದಿಟ್ಟು, ಮುಂದಿನ ಯೋಜನೆಗಳ ಬಗ್ಗೆ ಹಾಗೂ ಕಂಪನಿಯ ಅಭಿವೃದ್ಧಿ ಕುರಿತು ಕಂಪನಿಯ ಸದಸ್ಯರ ಸಹಕಾರವನ್ನು ಕೋರಿದರು. ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ಯು. ನಾರಾಯಣ್ ಭಟ್, ಸತ್ಯಶಂಕರ ಭಟ್, ಬಿ.ಎಸ್ ರಾಜೇಶ್ ರಾವ್, ಬಿ ನಿರಂಜನ್, ತಿಮ್ಮಯ ಗೌಡ, ವಾಸಪ್ಪ ಗೌಡ, ಪುರಂದರ ಎಸ್, ಲಿಂಗಪ್ಪ ನಾಯ್ಕ, ರೋಸ್ಲಿನ್ ಪಿಂಟೊ ಉಪಸ್ಥಿತರಿದ್ದರು.
ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್ ಬ್ರಾಗ್ಸ್ ಸ್ವಾಗತಿಸಿ, ನಿರ್ದೇಶಕ ಪುರಂದರ ಎನ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.