ತಿರುಪತಿ ಮಠಾಧೀಶರಿಗೆ “ಶತ ಸ್ಮೃತಿ – ಸಹಸ್ರ ಸುಕೃತ” ಸ್ಮರಣ ಸಂಚಿಕೆ ಅರ್ಪಣೆ

ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಮೂಲ ಪ್ರತಿಷ್ಠಾ ಶತಮಾನೋತ್ಸವದ ಅಂಗವಾಗಿ ನಡೆದ ಪದ್ಮಸಂಹಿತಾಂತರ್ಗತ ಏಕೋತ್ತರ ಸಹಸ್ರ ದ್ರವ್ಯ ಕುಂಭಾಭಿಷೇಕ ಮಹೋತ್ಸವದ ಸವಿ ನೆನಪಿಗಾಗಿ ಪೂರ್ಣವಾಗಿ ಸಿದ್ಧಗೊಂಡ “ಶತ ಸ್ಮೃತಿ – ಸಹಸ್ರ ಸುಕೃತ” ಸ್ಮರಣ ಸಂಚಿಕೆಯನ್ನು ತಿರುಪತಿಯಲ್ಲಿ ಶ್ರೀ ಸಂಸ್ಥಾನ ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀ ಶ್ರೀ ಸಂಯ್ಯಮೀಂದ್ರ ತೀರ್ಥ ಸ್ವಾಮೀಜಿಗಳಿಗೆ ಸಮರ್ಪಿಸಲಾಯಿತು.

ಪರಮಪೂಜ್ಯ ಸ್ವಾಮೀಜಿಗಳು ಸ್ಮರಣ ಸಂಚಿಕೆಯನ್ನು ನೋಡಿ ಶುಭ ಹಾರೈಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಹಸ್ರ ಕುಂಭಾಭಿಷೇಕ ಸಮಿತಿಯ ಗೌರವಾಧ್ಯಕ್ಷ ಹಾಗೂ ಆಡಳಿತ ಮೊಕ್ತೇಸರರಾದ  ಮೂರ್ಜೆ ವಿವೇಕಾನಂದ ಪ್ರಭು, ಅಧ್ಯಕ್ಷ ಎ. ಚಂದ್ರಕಾಂತ್ ಕಾಮತ್, ಸಂಚಾಲಕ  ಕೆ. ನರಸಿಂಹ ನಾಯಕ್,  ಎ. ಶ್ರೀಕಾಂತ ಕಾಮತ್, ಪುತ್ತೂರು ನರಸಿಂಹ ನಾಯಕ್ ಹಾಗೂ ಜಿ. ಎಸ್. ಬಿ. ಸಮಾಜ ಬಾಂಧವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.