HomePage_Banner_
HomePage_Banner_

ಅ.3: “ರಕ್ತ ಕೊಟ್ಟೇವು- ಪಿಂಚಣಿ ಬಿಡೆವು”ರಾಷ್ಟ್ರೀಯ ಪಿಂಚಣಿ ನೀತಿ ವಿರುದ್ಧ ಹೋರಾಟ

ಬೆಳ್ತಂಗಡಿ: ನಿವೃತಿಯ ಬಳಿಕ ಇಳಿವಯಸ್ಸಿನಲ್ಲಿ ಗೌರವಯುತ ಬಾಳುವೆ ನಡೆಸಬಹುದೆಂಬ ಆಶಾಭಾವನೆಯಿಂದ ಸರಕಾರಿ ನೌಕರಿ ಪಡೆದಿರುವ ಎನ್‌ಪಿಎಸ್ ನೌಕರರರು ರಾಷ್ಟ್ರೀಯ ಪಿಂಚಣಿ ಹೊಸ ಕಾಯ್ದೆಯಂತೆ ನಿವೃತಿಯ ನಂತರ ಪಿಂಚಣಿ ವಂಚಿತರಾಗಿ ಬದುಕು ಸಾಗಿಸುವಂತಾಗಿರುವುದರ ವಿರುದ್ಧ ಈಗಾಗಲೇ ಸರಕಾರದ ಗಮನಸೆಳೆವ ಹೋರಾaಟಗಳನ್ನು ನಡೆಸಿದ್ದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅ. 3 ರಂದು “ರಕ್ತ ಕೊಟ್ಟೇವು- ಪಿಂಚಣಿ ಬಿಡೆವು” ಎಂಬ ವಿನೋತನ ಹೋರಾಟದ ಹೆಜ್ಜೆ ಇಟ್ಟಿದ್ದಾರೆ.
ಹೋರಾಟದ ಭಾಗವಾಗಿ ಬೆಳ್ತಂಗಡಿ ಮಿನಿ ವಿಧಾನ ಸೌಧದ ಮುಂದೆ ಎನ್‌ಪಿಎಸ್ ನೌಕರರಿಂದ ಇಡೀ ದಿನ ಧರಣಿ ಸತ್ಯಾಗ್ರಹ, ಸರಕಾರಿ ರಕ್ತ ನಿಧಿಗೆ ಸಮರ್ಪಣೆಯಾಗುವಂತೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಒಂದು ಕಡೆ ವೇದಿಕೆಯಲ್ಲಿ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ವಿಶೇಷ ವೇದಿಕೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ನಡೆಯಲಿದೆ ಎಂದು ಎನ್‌ಪಿಎಸ್ ನೌಕರರ ಸಂಘದ ತಾ. ಅಧ್ಯಕ್ಷ ಸುರೇಶ್ ಮಾಸ್ಟರ್ ಮಾಚಾರ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.