HomePage_Banner_
HomePage_Banner_
HomePage_Banner_

ಕಬಡ್ಡಿ: ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದ ತಾಲೂಕಿನ ಇಬ್ಬರು ಕುವರಿಯರು

     ಐಶ್ವರ್ಯ                                                                                                               ಅಕ್ಷತಾ

ಬೆಳ್ತಂಗಡಿ: ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡದಲ್ಲಿ ತಾಲೂಕಿನ ಇಬ್ಬರು ಕುವರಿಯರಾದ ಪಟ್ರಮೆಯ ಕು| ಅಕ್ಷತಾ ಮತ್ತು ಉಜಿರೆ ಗುರಿಪಳ್ಳದ ಐಶ್ವಯಾ ಸ್ಥಾನ ಪಡೆದುಕೊಂಡಿದ್ದು ತಾಲೂಕಿನ ಕೀರ್ತಿ ಎತ್ತಿ ಹಿಡಿದಿದ್ದಾರೆ.
ಬಂಟ್ವಾಳ ತಾಲೂಕು ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿನಿಯರಾದ ಇವರು ಅಕ್ಟೋಬರ್ 1 ರಿಂದ 5 ರವರೆಗೆ ಮಧ್ಯಪ್ರದೇಶದಲ್ಲಿ ನಡೆಯಲಿರುವ ಪ್ರೌಢಶಾಲಾ ಬಾಲಕಿಯರ ವಿಭಾಗದ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಅಕ್ಷತಾ ಇವರು ಪಟ್ರಮೆ ಗ್ರಾಮದ ಅಶ್ವತ್ತಡಿ ನಿವಾಸಿ ಮೋಹಿನಿ ಮತ್ತು ಸದಾಶಿವ ಗೌಡ ದಂಪತಿ ಪುತ್ರಿಯಾಗಿದ್ದು, ಪಟ್ರಮೆಯ ಸ.ಕಿ.ಪ್ರಾ.ಶಾಲೆ ಅನಾರು ಇಲ್ಲಿ 1 ರಿಂದ 5 ನೇ ತರಗತಿಯವರೆಗೆ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದು, 6 ನೇ ತರಗತಿಯಿಂದ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.
ಐಶ್ವರ್ಯ ಅವರು ಗುರಿಪಳ್ಳ ರಾಮಚಂದ್ರ ಮತ್ತು ವಸಂತಿ ದಂಪತಿ ಪುತ್ರಿಯಾಗಿದ್ದು, 1 ರಿಂದ 5ನೇ ತರಗತಿವರೆಗಿನ ವಿದ್ಯಾಭ್ಯಾಸವನ್ನು ಸ್ಥಳೀಯ ಗುರಿಪಳ್ಳ ಸರಕಾರಿ ಶಾಲೆಯಲ್ಲಿ ಪೂರೈಸಿದ್ದಾರೆ. ಆ ಬಳಿಕ ಸರಕಾರಿ ಆಯ್ಕೆ ಪ್ರಕ್ರೀಯೆಯಲ್ಲಿ ಅವರು ವಗ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರವೇಶ ಪಡೆದಿದ್ದಾರೆ.
15 ಕ್ಕೂ ಅಧಿಕ ಮಂದಿಯನ್ನು ರಾಷ್ಟ್ರಮಟ್ಟಕ್ಕೆ ತಯಾರುಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕ ವಿದ್ಯಾರ್ಥಿಗಳ ಈ ಮಟ್ಟದ ಕ್ರೀಡಾ ಸಾಧನೆಗೆ ಇದೇ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಶೀದ್ ಪಡಂಗಡಿ ಇವರು ಸೂಕ್ತ ತರಬೇತಿ ನೀಡಿದ್ದಾರೆ. ಎಸ್‌ಡಿಎಂ ಉಜಿರೆಯ ಹಳೆವಿದ್ಯಾರ್ಥಿಯಾಗಿರುವ ಅಶೀದ್ ಮುಂಡಾಜೆ ಯಂಗ್ ಚಾಲೆಂಜರ್‍ಸ್ ಕ್ರೀಡಾ ಸಂಘ ಕಬಡ್ಡಿ ತಂಡದ ಮಾಜಿ ಸದಸ್ಯ. ಇವರು ಇದೇ ಶಾಲೆಯ ಮೂಲಕ ಈಗಾಗಲೇ ಸುಮಾರು 15 ರಷ್ಟು ಮಂದಿ ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ರಾಜ್ಯ ರಾಷ್ಟ್ರ ಮಟ್ಟದವರೆಗೆ ಭಾಗವಹಿಸುವಂತಾಗಲು ತರಬೇತಿ ನೀಡಿದ್ದಾರೆ.

Advt_NewsUnder_
Advt_NewsUnder_
Advt_NewsUnder_

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.