ಬಿದ್ದು ಸಿಕ್ಕಿದ ಬ್ಯಾಗ್‌ನಲ್ಲಿದ್ದ 3.20 ಲಕ್ಷ ರೂ. ಮೌಲ್ಯದ ಚಿನ್ನ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ನಾಗರಿಕ

Advt_NewsUnder_1
Advt_NewsUnder_1
Advt_NewsUnder_1

ಚಾರ್ಮಾಡಿ: ಚಾರ್ಮಾಡಿ ಗ್ರಾಮದ ರಸ್ತೆ ಬದಿಯಲ್ಲಿ ಬಿದ್ದು ಸಿಕ್ಕಿದ್ದ ಬ್ಯಾಗ್‌ನಲ್ಲಿದ್ದ 3.20 ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಮತ್ತು ನಗದು ಸಹಿತ ಪರ್ಸನ್ನು ಬ್ಯಾಗ್ ಕಳೆದುಕೊಂಡಿದ್ದ ಕುಂದಾಪುರದ ಕುಟುಂಬಕ್ಕೆ ಧರ್ಮಸ್ಥಳ ಠಾಣೆಯಲ್ಲಿ ಎಸ್‌ಐ ಅವರ ಮೂಲಕ ಮರಳಿಸಿ ಚಾರ್ಮಾಡಿಯ ನಾಗರಿಕ ಮುಹಮ್ಮದ್ ಆಲಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಬ್ಯಾಗಿನಲ್ಲಿದ್ದ ಮೊಬೈಲ್ ಫೋನ್ ಆಧರಿಸಿ ಅದರ ಬೇರೆ ನಂಬರ್‌ಗೆ ಕರೆಮಾಡಿ ಬ್ಯಾಗ್ ಕಳೆದುಕೊಂಡವರನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬೈಂದೂರು ಕೋನೂರು ಪಡುವರಿ ಗ್ರಾಮದ ನಿವಾಸಿ ಶ್ರೀಮತಿ ಪ್ರೇಮಾ ಮತ್ತು ರಾಮಚಂದ್ರ ದೇವಾಡಿಗ ಎಂಬವರೆಂದು ಖಚಿತಪಡಿಸಿಕೊಂಡು ಅವರನ್ನು ಠಾಣೆಗೆ ಬರುವಂತೆ ಮಾಡಿ ಹಸ್ತಾಂತರ ಪ್ರಕ್ರೀಯೆ ನಡೆಸಲಾಯಿತು. ತಿರುಪತಿ ದರ್ಶನ ಮುಗಿಸಿ ಬೆಂಗಳೂರಿನಿಂದ ಉಡುಪಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುವಾಗ ಬೆಳಿಗ್ಗಿನ ಜಾವಾ ಕೈ ಜಾರಿ ಬಸ್ಸಿನಿಂದ ಕೆಳಬಿದ್ದಿತ್ತು. ಮುಹಮ್ಮದ್ ಆಲಿ ಅವರ ಈ ಪ್ರಾಮಾಣಿಕ ನಡೆಗೆ ಜಿಲ್ಲಾ ಪೊಲೀಸ್ ಎಸ್‌ಪಿ ಡಾ. ರವಿಕಾಂತೇ ಗೌಡ ಸಹಿತ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.