HomePage_Banner_
HomePage_Banner_

ಚಾರ್ಮಾಡಿ ಘಾಟ್‌ನಲ್ಲಿ ಲಾರಿ ಪಲ್ಟಿ: ಸಂಚಾರದಲ್ಲಿ ಭಾರೀ ವ್ಯತ್ಯಯ

ಚಾರ್ಮಾಡಿ ಕಣಿವೆ ರಸ್ತೆಯ ಮೂರನೇ ತಿರುವಿನಲ್ಲಿ ಬಾಳೆ ಹಣ್ಣು ತುಂಬಿದ್ದ ಲಾರಿಯೊಂದು ಬೆಳಗ್ಗಿನ ಜಾವ ಮಗುಚಿ ಬಿದ್ದು ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು.
ಚಾರ್ಮಾಡಿ ಘಾಟಿಯ ರಸ್ತೆಗಳಲ್ಲಿ ಭಾರೀ ಗಾತ್ರದ ಗುಂಡಿಗಳು ಬಿದ್ದಿದ್ದು ಈ ಗುಂಡಿಗಳಿಗೆ ಬಿದ್ದು ವಾಹನಗಳು ಮಗುಚಿ ಬೀಳುವುದು ಆಗಾಗ ಸಂಭವಿಸುತ್ತಿದೆ.
ಅಪಘಾತದ ಮಾಹಿತಿ ಪಡೆದ ಸ್ಥಳೀ ಸಮಾಜ ಸೇವಕ ಚಾರ್ಮಾಡಿ ಹಸನಬ್ಬ ಅವರ ನೇತೃತ್ವದಲ್ಲಿ ಸ್ಥಳೀಯರು ಸೇರಿ ಲಾರಿಯನ್ನು ತೆರವು ಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ರಸ್ತೆ ಸ್ಥಗಿತದ ಪರಿಣಾಮ ಬೆಳಗ್ಗೆ 6 ಗಂಟೆಯ ವೇಳೆ ಘಾಟ್ ರಸ್ತೆ ಇಳಿಯಬೇಕಾಗಿದ್ದ ಖಾಸಗಿ ಬಸ್ಸುಗಳು 3-4 ಗಂಟೆ ತಡವಾಗಿ 10 ಗಂಟೆಗೆ ಬರುವಂತಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.