HomePage_Banner_
HomePage_Banner_
HomePage_Banner_

ಪೆ.16: ಧರ್ಮಸ್ಥಳ ಮಹಾ ಮಸ್ತಕಾಭಿಷೇಕ

Advt_NewsUnder_1

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 2019 ರ ಫೆ.16 ರಿಂದ ಮಹಾ ಮಸ್ತಕಾಭಿಷೇಕ ನಡೆಯಲಿದೆ. ಫೆ.9 ರಂದು ತೋರಣ ಮುಹೂರ್ತ ನಡೆಯಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಘೋಷಿಸಿದ್ದಾರೆ.
108 ಮುನಿಶ್ರೀ ವೀರಸಾಗರ ಚಾತುರ್ಮಾಸದ ಪ್ರಯುಕ್ತ ಕಾರ್ಕಳದಲ್ಲಿ ಸೆ.24 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಹಾ ಮಸ್ತಕಾಭಿಷೇಕದ ದಿನಾಂಕ ಘೋಷಿಸಿದರು. ಇದೇ ವೇಳೆ ಮಹಾ ಮಸ್ತಕಾಭಿಷೇಕದಲ್ಲಿ ಮುನಿಶ್ರೀ ವೀರಸಾಗರ ಮಹಾರಾಜರು ಉಪಸ್ಥಿತರಿದ್ದು, ಮಾರ್ಗದರ್ಶನ ನೀಡುವಂತೆ ಕೇಳಿಕೊಂಡರು.
ಕೀರ್ತಿಶೇಷ ಡಿ.ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಇಚ್ಚೆಯಂತೆ 1982 ರಲ್ಲಿ ಧರ್ಮಸ್ಥಳದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ದಂಪತಿ ಭಗವಾನ್ ಬಾಹುಬಲಿಯ 39 ಅಡಿ ಎತ್ತರದ ವಿಗ್ರಹವನ್ನು ಶಿಲ್ಪಿ ರೆಂಜಾಳ ಗೋಪಾಲ ಶೆಣೈ ರವರಿಂದ ಕಾರ್ಕಳದಲ್ಲಿ ಕೆತ್ತಿಸಿ, ಧರ್ಮಸ್ಥಳದಲ್ಲಿ ಪ್ರತಿಷ್ಠಾಪಿಸಿ, ಅದೇ ವರ್ಷ ಮೊದಲ ಮಸ್ತಕಾಭಿಷೇಕ ನಡೆದಿತ್ತು. ಜನಕಲ್ಯಾಣ ಕಾರ್ಯವಾಗಿ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಪ್ರಾರಂಭವಾಗಿತ್ತು. ಪ್ರತಿ 12 ವರ್ಷಗಳಿಗೊಮ್ಮೆ ಮಹಾ ಮಸ್ತಕಾಭಿಷೇಕ, ಪ್ರತಿ ವರ್ಷ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ ನಡೆಯುತ್ತದೆ.1994, 2007 ರಲ್ಲಿ ಮಹಾಮಸ್ತಕಾಭಿಷೇಕ ನಡೆದಿತ್ತು. ಆರಂಭದಲ್ಲಿ 5 ದಿನಗಳ ಕಲ್ಯಾಣ ಕಾರ್ಯಕ್ರಮ, ಮೂರು ದಿನ ಸತತ ಮಸ್ತಕಾಭಿಷೇಕ ನಡೆಯಲಿದೆ. ಭಕ್ತರ ಅಪೇಕ್ಷೆ ಮೇರೆಗೆ ಪ್ರತಿ ಶನಿವಾರ, ರವಿವಾರ ಮಸ್ತಕಾಭಿಷೇಕ ಮುಂದುವರಿಯುತ್ತದೆ ಎಂದು ಡಾ| ಹೆಗ್ಗಡೆ ಘೋಷಣೆ ಮಾಡಿದ್ದಾರೆ.
ದಿಗಂಬರ ಆಚಾರ್ಯ ವರ್ಧಮಾನ ಸಾಗರ್‌ಜಿ ಮಹಾರಾಜರು, ಪುಷ್ಪದಂತ ಸಾಗರಜಿ ಮಹಾರಾಜರು ಪಾಲ್ಗೊಳ್ಳಲಿದ್ದಾರೆ. ಈ ವರ್ಷದ ಜನ ಕಲ್ಯಾಣ ಕಾರ್ಯವಾಗಿ ರಾಜ್ಯದಲ್ಲಿ 200 ಕೆರೆಗಳ ಹೂಳೆತ್ತುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.