HomePage_Banner_
HomePage_Banner_

ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಲೇಖನ ಮತ್ತು ನುಡಿಚಿತ್ರ ಬರಹ ಸ್ಪರ್ಧೆ

ಧರ್ಮಸ್ಥಳ: ಮಹಾತ್ಮ ಗಾಂಧೀಜಿಯವರ 150ನೇ ಹುಟ್ಟುಹಬ್ಬದ ಸವಿನೆನಪಿಗಾಗಿ ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಸಂಕಲ್ಪಿಸಿದ ‘ಭೂಮಿತಾಯಿಯನ್ನು ಸಂರಕ್ಷಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸುವ’ ಬೃಹತ್ ಆಂದೋಲನದ ಅಂಗವಾಗಿ ಹಾಗೂ ನಿರಂತರ ಮಾಸಪತ್ರಿಕೆ ಹದಿನೈದು ಸಂವತ್ಸರಗಳನ್ನು ಪೂರೈಸಿದ ಸವಿನೆನಪಿಗಾಗಿ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಲೇಖನ ಮತ್ತು ನುಡಿಚಿತ್ರ ಬರಹ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಅಭಿಯಾನದ ವಿವರಗಳುಳ್ಳ ಭಿತ್ತಿಪತ್ರವನ್ನು ಸೆ. 24 ರಂದು ಹೆಗ್ಗಡೆ ದಂಪತಿಗಳು ತಮ್ಮ ನಿವಾಸದಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.

ಈ ಸಂದರ್ಭ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಎಚ್. ಮಂಜುನಾಥ್, ನಿರಂತರ ಪತ್ರಿಕೆಯ ಸಂಪಾದಕರಾದ ಚಂದ್ರಹಾಸ ಚಾರ್ಮಾಡಿಯವರು ಮತ್ತು ನಿರಂತರ ಪತ್ರಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹನ್ನೆರಡು ವಿಷಯಗಳಲ್ಲಿ ಸ್ಪರ್ಧೆ ನಡೆಯಲಿದ್ದು ಒಟ್ಟು ರೂ. 2 ಲಕ್ಷ ಆಕರ್ಷಕ ಮೊತ್ತದ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಸ್ಪರ್ಧೆಯಲ್ಲಿ 62 ಬಹುಮಾನಗಳಿವೆ. ಆಸಕ್ತ ವಿದ್ಯಾರ್ಥಿಗಳು ವಿವರಗಳಿಗಾಗಿ ತಮ್ಮ ಕಾಲೇಜಿನ ಪ್ರಾಂಶುಪಾಲರನ್ನು ಸಂಪರ್ಕಿಸಬಹುದಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.