ಹಳೆಗನ್ನಡ “ಕಾವ್ಯಯಾನ” ಸರಣಿ ಸಮಾರೋಪ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಹಳೆಗನ್ನಡ ಕಾವ್ಯ ಆಸಕ್ತಿಯಿಂದ ಕೇಳುವುದರಿಂದ ಮನಸ್ಸಿಗೆ ಖುಷಿ, ಪುಣ್ಯ ಮತ್ತು ಲೋಕಜ್ಞಾನ ವೃದ್ಧಿಯಾಗುತ್ತದೆ ಎಂದು ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಅಭಿಪ್ರಾಯಪಟ್ಟರು.
ಉಜಿರೆ ಎಸ್‌ಡಿಎಂ (ರಾಜ್ಯ ಪಠ್ಯ ಕ್ರಮ) ದಲ್ಲಿ ಸೆ. 24 ರಂದು ನಡೆದ, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾ. ಘಟಕದ ಹಮ್ಮಿಕೊಂಡಿದ್ದ ತಾಲೂಕಿನ ಆಯ್ದ 12 ಶಿಕ್ಷಣ ಸಂಸ್ಥೆಗಳಲ್ಲಿ ಹಮ್ಮಿಕೊಂಡಿದ್ದ ಹಳೆಗನ್ನಡ ಕಾವ್ಯ ವಾಚನ ಪ್ರವಚನ ಮಾಲಿಕೆಯ ಸಮರೋಪದಲ್ಲಿ ಅವರು ಮಾತನಾಡುತ್ತಿದ್ದರು.
ಪುರಾತನವಾದ ಗಮಕ ಕಲೆಯಿಂದ ಜನರಲ್ಲಿ ನೈತಿಕತೆ ಬೆಳೆಯಲು ಕಾರಣವಾಗುತ್ತದೆ. ದ.ಕ ಜಿಲ್ಲೆಯಲ್ಲಿ ಗಮಕದ ಸ್ಥಾನವನ್ನು ಯಕ್ಷಗಾನ ಕ್ಷೇತ್ರ ಪಡೆದುಕೊಂಡಿದ್ದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕಾರಣವಾಗಿದೆ. 64 ಬಗೆಯ ಕಲಾ ಪ್ರಾಕಾರಗಳಲ್ಲಿ 19 ನೇ ಸ್ಥಾನ ಪಡೆದಿರುವ ಗಮಕ ಕಲೆ ಏನು ಎಂಬುದನ್ನು ತಿಳಿಸಿಕೊಡುವ ಕೆಲಸ ತಾಲೂಕು ಕಸಾಪ ದಿಂದ ಆಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರೋಪದಂಗವಾಗಿ ಹಮ್ಮಿಕೊಂಡಿದ್ದ ಕಾವ್ಯಯಾನ ಕಾರ್ಯಕ್ರಮದಲ್ಲಿ ಮಧೂರು ಮೋಹನ ಕಲ್ಲೂರಾಯ ಗಮಕ ಕಾವ್ಯ ವಾಚನ ನಡೆಸಿದರೆ, ಕಸಾಪ ತಾ. ಗೌರವ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ವ್ಯಾಖ್ಯಾನಗೈದರು. ಕಸಾಪ ತಾ. ಗೌರವ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾಲಕ್ಷ್ಮೀ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ದೀಕ್ಷಾ ಕಾರ್ಯಕ್ರಮ ನಿರೂಪಿಸಿ, ಮೃಧುಲಾ ಸ್ವಾಗತಿಸಿದರು. ಅಶ್ವಿನಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.