ಮಡಂತ್ಯಾರಿನಲ್ಲಿ ಲೋಬೋ ಮೋಟಾರ್‍ಸ್ ನೂತನ ಶಾಖೆ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು : ಬೆಳ್ತಂಗಡಿಯಲ್ಲಿ ಕಳೆದ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಟಿವಿಎಸ್ ಲೋಬೊ ಮೋಟಾರ್‍ಸ್ ದ್ವಿಚಕ್ರ ವಾಹನಗಳ ಮಳಿಗೆಯ ನೂತನ ಶಾಖೆಯು ಮಡಂತ್ಯಾರು ಬಸವನಗುಡಿ ಬಳಿ ಇರುವ ಆಭರಣ ಕಾಂಪ್ಲೆಕ್ಸ್‌ನಲ್ಲಿ ಸೆ.23 ರಂದು ಉದ್ಘಾಟನೆಗೊಂಡಿತು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಧರ್ಮಪ್ರಾಂತ್ಯದ ಧರ್ಮಗುರು ವಂ| ಬಾಸಿಲ್ ವಾಸ್ ಶೋರೂಂ ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ನೂತನ ತಂತ್ರಜ್ಞಾನ ಹಾಗೂ ಹೊಸ ಶೈಲಿಯೊಂದಿಗೆ ಟಿವಿಎಸ್ ವಾಹನಗಳು ಮರುಕಟ್ಟೆಗೆ ಬರುತ್ತಿದ್ದು, ಅದನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಲೋಬೋ ಸಂಸ್ಥೆ ಉತ್ತಮ ಕೆಲಸ ಮಾಡಲಿ ಎಂದು ಸಂಸ್ಥೆಗೆ ಶುಭ ಹಾರೈಸಿದರು.
ಸಮಾರಂಭದಲ್ಲಿ ತಾ.ಪಂ ಮಾಜಿ ಸದಸ್ಯ ವಿನ್ಸೆಂಟ್ ಡಿಸೋಜ, ಕೆಥೋಲಿಕ್ ಸಹಕಾರಿ ಸಂಘದ ಅಧ್ಯಕ್ಷ ಲ್ಯಾನ್ಸಿ ಪಿಂಟೋ, ಬಿಜೆಪಿ ಮುಂದಾಳು ಸಂಜೀವ ಶೆಟ್ಟಿ ಮುಗೆರೋಡಿ, ಮಡಂತ್ಯಾರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ ಲಿಯೋ ರೊಡ್ರಿಗಸ್, ಕಟ್ಟಡ ಮಾಲಕ ರಾಜೇಶ್, ಗ್ರಾ.ಪಂ ಸದಸ್ಯ ಜೋಯೆಲ್ ಮೆಂಡೋನ್ಸಾ, ಸಿರಿಲ್ ಸಿಕ್ವೇರಾ, ತೆರೆಜಾ ಡಿಕೋಸ್ತಾ, ಮೆಲ್ವಿನ್ ಕೊರೆಯಾ, ಅಜಯ್ ಡಿಕುನ್ಹಾ ಉಪಸ್ಥಿತರಿದ್ದರು.
ಬಂದ ಅತಿಥಿಗಳನ್ನು ಸ್ವಾಗತಿಸಿದ ಸಂಸ್ಥೆಯ ಮಾಲಕ ರೊನಾಲ್ಡ್ ಲೋಬೋ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಸಂಸ್ಥೆಯು ಇಲ್ಲಿ ಶಾಖೆಯನ್ನು ತೆರೆದಿದ್ದು, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮನವಿ ಮಾಡಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.