ಬೆಳ್ತಂಗಡಿ ಮಂಜುಶ್ರೀ ಜೇಸಿ ಸಪ್ತಾಹ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ 41ನೇ ವರ್ಷದ ಜೇಸಿ ಸಪ್ತಾಹ  ನಿನಾದ ಉದ್ಘಾಟನಾ ಸಮಾರಂಭವು ಸೆ.21 ರಂದು ಬೆಳ್ತಂಗಡಿಯ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಜರುಗಿತು.

ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಉದ್ಘಾಟನೆಯನ್ನು ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಹಶಿಲ್ದಾರ್ ಮದನ್ ಮೋಹನ್ ಗೌರವ ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪೂರ್ಣಿಮ ಉಜಿರೆ, ಚರಣ್ ಕೆ ಮಚ್ಚಿನ, ಉಮಾಶಂಕರಿ ಸವಣಾಲು, ರಚನಾ ಮಡಂತ್ಯಾರು ಇವರಿಗೆ ಪ್ರತಿಭಾ ಪುರಸ್ಕಾರ ನಡೆಯಿತು . ವೇದಿಕೆಯಲ್ಲಿ ಜೇಸಿ ಅಧ್ಯಕ್ಷ ಕಿರಣ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ವಿಶಾಲ್ ಆಗಸ್ಟಿನ್, ಸಪ್ತಾಹ ಸಂಯೋಜಕ ಸ್ವರೂಪ್ ಶೇಖರ್, ವಲಯನಿರ್ದೇಶಕ ಚಿದಾನಂದ ಇಡ್ಯ, ಉದಕ ಪ್ರತಿಕೆ ಸಂಪಾದಕ ವಸಂತ ಶೆಟ್ಟಿ, ಪೂರ್ವಾಧ್ಯಕ್ಷರಾದ ತುಕರಾಮ, ಸಂತೋಷ್ ಕೋಟ್ಯಾನ್, ಶ್ರೀನಾಥ್ ಕೆ.ಎಂ, ಸಹ ಸಂಯೋಜಕ ತನ್ಸೀಪ್ ಕಿಲ್ಲೂರು ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.