ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣೆ

ಬೆಳ್ತಂಗಡಿ: ಕೆಲ್ಲಗುತ್ತು ಸಬರಬೈಲು ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಮೆಮೊರಿಯಲ್ ಟ್ರಸ್ಟ್ ವತಿಯಿಂದ, ಕೆಲ್ಲಗುತ್ತು ಸಬರಬೈಲು ಕಿನ್ಯಮ್ಮ ಯಾನೆ ಗುಣವತಿ ಅಮ್ಮನವರ ಇಪ್ಪತ್ತೊಂಭತ್ತನೇ ಪುಣ್ಯತಿಥಿ ಹಾಗೂ ಅವಿಭಜಿತ ದ.ಕ ಜಿಲ್ಲಾ ಜೈನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭವು ಸೆ.21 ರಂದು  ಬೆಳ್ತಂಗಡಿ ಜೈನ್‌ಪೇಟೆ ಶ್ರೀ ರತ್ನತ್ರಯ ಜೈನ ತೀರ್ಥ ಕ್ಷೇತ್ರದಲ್ಲಿ  ಜರುಗಿತು.

ಸಮಾರಂಭದಲ್ಲಿ ಶ್ರೀ ಹೊಂಬುಜ ಅತಿಶಯ ಕ್ಷೇತ್ರ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಮದ್ದೇವೇಂದ್ರಕೀರ್ತಿ  ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಆಶಿರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ಮಾಜಿ ಸಚಿವ ಅಭಯಚಂದ್ರ ಜೈನ್ ಭಾಗವಹಿಸಿದ್ದರು. ಶ್ರೀ ರತ್ನತ್ರಯ ಜೈನ ತೀರ್ಥ ಕ್ಷೇತ್ರದ ಆಡಳಿತ ಮೊಕ್ತೇಸರ ಕೆ.ಜಯವರ್ಮರಾಜ ಬಲ್ಲಾಳ್, ಬೆಳ್ತಂಗಡಿ ಲಯನ್ಸ್ ವಲಯಾಧ್ಯಕ್ಷ ಧರಣೇಂದ್ರ ಕುಮಾರ್ ಜೈನ್ , ವಿಜಯಲಕ್ಷ್ಮೀ ಆರಿಗ, ಪ್ರಸನ್ನಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.