ಮಚ್ಚಿನ: ಉಚಿತ ವೈದ್ಯಕೀಯ ತಪಾಸಣೆ

ಮಚ್ಚಿನ: ತುಳು ಶಿವಳ್ಳಿ ಸಭಾ ಮಚ್ಚಿನ ವಲಯ, ಮೂಲ್ಯರ ಯಾನೆ ಕುಂಬಾರರ ಯುವ ವೇದಿಕೆ ಮಡಂತ್ಯಾರು ವಲಯ, ಛಾಯಾ ಮಿತ್ರರು ಬಳ್ಳಮಂಜ ಇವುಗಳ ವತಿಯಿಂದ ಮಾರಿಗುಡಿ ಮಾರಿಕಾಂಬಾ ದೇವಸ್ಥಾನದ ವಠಾರದಲ್ಲಿ ಬೆಳ್ತಂಗಡಿ ಪಸನ್ನ ಆಯುರ್ವೇದಿಕ್ ಕಾಲೇಜ್ ಮತ್ತು ಆಸ್ಪತ್ರೆ ಇವರಿಂದ ಉಚಿತ ವೈದ್ಯಕೀಯ ತಪಾಸಣೆ ಕಾರ್ಯಕ್ರಮವು ಇತ್ತೀಚೆಗೆ ಜರುಗಿತು.
ಪ್ರಸನ್ನ ಕಾಲೇಜು ಪ್ರಾಂಶುಪಾಲ ಡಾ| ಪ್ರಶಾಂತ್ ಎಮ್.ಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತುಳು ಶಿವಳ್ಳಿ ಸಭಾ ಸಂಘದ ಅಧ್ಯಕ್ಷ ಕೆ. ಗುರುಪ್ರಸಾದ್, ಕಾರ್ಯದರ್ಶಿ ಡಾ| ಕೆ.ಎಸ್ ಬಲ್ಲಾಳ್, ಮಹಿಳಾ ಘಟಕದ ಅಧ್ಯಕ್ಷೆ ಬಿ.ಜಯಶ್ರೀ ಪ್ರಕಾಶ್, ಕಾರ್ಯದರ್ಶಿ ಪವಿತ್ರ ಪ್ರಸಾದ್, ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ ರಾಜೇಶ್ ಕೋಡ್ಯೇಲು, ಕಾರ್ಯದರ್ಶಿ ದಿನೇಶ್ ಮಾಲಾಡಿ, ಮಚ್ಚಿನ ಮೂಲ್ಯರ ಯಾನೆ ಕುಂಬಾರರ ಅಧ್ಯಕ್ಷ ಕೆ.ಪದ್ಮನಾಭ ಕಾರಂದೂರು, ತಾ.ಪಂ ಸದಸ್ಯೆ ವಸಂತಿ ಲಕ್ಷಣ್, ಛಾಯಾ ಮಿತ್ರರಾದ ಹರ್ಷ ಸ್ಟುಡಿಯೋ ಮಾಲಕ ಹರ್ಷ ಬಳ್ಳಮಂಜ, ಡಾ| ಶ್ರೀ ಕುಮಾರ್, ಡಾ| ವಿದ್ಯಾ ಆಡಿಗ, ಡಾ| ಹರ್ಷವರ್ದನ, ಸ್ತ್ರೀರೋಗ ಪ್ರಸೂತಿ ತಜ್ಞೆ ಡಾ| ಕೆ.ವಿದ್ಯಾ ಬಲ್ಲಾಳ್ ಉಪಸ್ಥಿತರಿದ್ದರು.
ಡಾ| ಕೆ. ಎಸ್ ಬಲ್ಲಾಳ್ ಸ್ವಾಗತಿಸಿ, ಛಾಯಾಗ್ರಾಹಕ ಹರ್ಷ ವಂದಿಸಿ, ಕೆ. ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.